ಸ್ಪರ್ಧಾ ಮನೋಭಾವ ಅಗತ್ಯ : ವಿಜಯ್ ಕುಮಾರ್ ಕೊಡಿಯಲ್ ಬೈಲ್

mng--13 April S C S
Published on

ಮಂಗಳೂರು: ಜಾಗತಿಕ ಮಟ್ಟದ ಶೈಕ್ಷಣಿಕ ಕ್ಷೇತ್ರದಲ್ಲಿ ಆಗುತ್ತಿರುವ ಬದಲಾವಣೆಗಳು ಆರೋಗ್ಯಕರವಾಗಿರಬೇಕು. ವಿದ್ಯಾರ್ಥಿಗಳ ಮನಸ್ಸಿನಲ್ಲಿ ಯೋಜನೆ ಮತ್ತು ಯೋಚನೆ ಅರ್ಥಪೂರ್ಣವಾಗಿ ಮುಂದುವರಿದಾಗ ಶಿಕ್ಷಣ ಕ್ಷೇತ್ರಕ್ಕೊಂದು ಒಳ್ಳೆಯ ಆಯಾಮ ದೊರೆತಂತಾಗುತ್ತದೆ. ಜೊತೆಗೆ ಸ್ಪರ್ಧಾತ್ಮಕ ಮನೋಭಾವನೆ ಬೆಳೆಯುವಂತಾಗುತ್ತದೆ ಎಂದು ತುಳು ನಾಟಕಕಾರ, ಚಲನಚಿತ್ರ ನಿರ್ದೇಶಕ ವಿಜಯ್ ಕುಮಾರ್ ಕೊಡಿಯಲ್ ಬೈಲ್ ಅಭಿಪ್ರಾಯಪಟ್ಟರು.

ಅವರು ಮಂಗಳೂರು ನಗರದ ಎಸ್.ಸಿ.ಎಸ್ ಪ್ರಥಮ ದರ್ಜೆ ಕಾಲೇಜಿನ ಆಂತರಿಕ ಸ್ಪರ್ಧೋತ್ಸವದ ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು.

ಎಸ್. ಸಿ.ಎಸ್ ಸಮೂಹ ಶಿಕ್ಷಣ ಸಂಸ್ಥೆಗಳ ಮುಖ್ಯ ಆಡಳಿತ ಅಧಿಕಾರಿ ಯು.ಕೆ. ಖಾಲಿದ್ ಅವರು ’ ಇಂದಿನ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಮನೋಭಾವನೆ ರೂಢಿಸಿ ಕೊಂಡಾಗ ವಿದ್ಯಾರ್ಥಿಯ ವ್ಯಕ್ತಿತ್ವ ವಿಕಾಸವಾಗುತ್ತದೆ ಎಂದರು.

ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ’ಅಷ್ಟಾವಧಾನಿ’ ಡಾ. ಕಬ್ಬಿನಾಲೆ ಬಾಲಕೃಷ್ಣ ಭಾರದ್ವಾಜ್ ವಹಿಸಿದ್ದರು.

ಎಸ್.ಸಿ.ಎಸ್ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಪ್ರೊ.ರಾಜಾರಾಮ್ ರಾವ್, ಎಸ್.ಸಿ.ಎಸ್ ಪ್ರೀ ಸ್ಕೂಲ್ ನ ಪ್ರಾಂಶುಪಾಲೆ ವಿನಯ ಡಿಸೋಜ, ಎಸ್.ಸಿ.ಎಸ್ ಇಂಟರ್ನ್ಯಾಷನಲ್ ಸ್ಕೂಲ್ ನ ಪ್ರಾಂಶುಪಾಲೆ ಹೆಲೆನ್ ಲೋಬೊ, ಕಾರ್ಯಕ್ರಮದ ಸಂಯೋಜಕಿಯರಾದ ಪ್ರೊ. ಸುಚಿತ್ರ ಪಿ.ಶೆಟ್ಟಿ, ಪ್ರೊ. ದೀಕ್ಷಿತ ಅರ್, ,ಪ್ರೊ. ಮೇಘಶ್ರೀ ಉಪಸ್ಥಿತರಿದ್ದರು.

ಪ್ರೊ. ವರ್ಷವಿ. ರೈ ಕಾರ್ಯಕ್ರಮ ನಿರೂಪಿಸಿದರು. ಪ್ರೊ.ರೂಪ ರಾವ್, ಪ್ರೊ. ಅಕ್ಷತಾ, ಪ್ರೊ. ಚೆರಿತ , ಪ್ರೊ .ಚರಣ್ ರಾಜ್ ಬಹುಮಾನ ವಿತರಿಸಿದರು. ವಿದ್ಯಾರ್ಥಿ ಸಂಯೋಜಕರಾದ ನೈರುತ್ಯ, ಧನುಷ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net