ಸಂಘನಿಕೇತನ ಗಣೇಶೋತ್ಸವಕ್ಕೆ ಕ್ರೈಸ್ತ್ತ ಮುಖಂಡರ ಭೇಟಿ

mng--22 sep sanganikethana cristha
Published on


ಮಂಗಳೂರು: ಸಂಘನಿಕೇತನದಲ್ಲಿ ಕೇಶವ ಸ್ಮತಿ ಸಂವರ್ಧನ ಸಮಿತಿ ಆಶ್ರಯದಲ್ಲಿ ನಡೆಯುತ್ತಿರುವ 76ನೇ ವರ್ಷದ ಸಾರ್ವಜನಿಕ ಗಣೇಶೋತ್ಸವಕ್ಕೆ ರಾಷ್ಟ್ರೀಯವಾದಿ ಕ್ರೈಸ್ತರ ವೇದಿಕೆ ನೇತೃತ್ವದಲ್ಲಿ ವರ್ಷಂಪ್ರತಿಯಂತೆ ಸೌಹಾರ್ದತೆ, ಸಾಮಾಜಿಕ ಸಾಮರಸ್ಯ ಹಾಗೂ ರಾಷ್ಟ್ರೀಯ ಐಕ್ಯತೆಗಾಗಿ ಕ್ರೈಸ್ತ ಸಮುದಾಯದ ಗಣ್ಯರು ಶುಕ್ರವಾರ ಭೇಟಿ ನೀಡಿ, ಪ್ರಸಾದ ಸ್ವೀಕರಿಸಿದರು.


ಆರ್‌ಎಸ್‌ಎಸ್ ದಕ್ಷಿಣ ಪ್ರಾಂತ ಸಂಘಚಾಲಕ ಡಾ.ವಾಮನ್ ಶೆಣೈ ನೇತೃತ್ವದಲ್ಲಿ ಗಣೇಶೋತ್ಸವ ಸಮಿತಿ ಪದಾಧಿಕಾರಿಗಳು ಕ್ರೈಸ್ತ ಮುಖಂಡರನ್ನು ಬರಮಾಡಿಕೊಂಡರು. ಕ್ರೈಸ್ತ ಮುಖಂಡರು ಬೆಳ್ಳಿಯ ಹರಿವಾಣದಲ್ಲಿ ಫಲಪುಷ್ಪ ಸಮರ್ಪಿಸಿ ಗಣೇಶನಿಗೆ ವಿಶೇಷ ಪೂಜೆ ಸಲ್ಲಿಸಿದರು. ಮಂಗಳೂರು ಕ್ರೈಸ್ತ ಧರ್ಮಪ್ರಾಂತದ ಸಾರ್ವಜನಿಕ ಸಂಪರ್ಕಾಧಿಕಾರಿ ರಾಯ್ ಕ್ಯಾಸ್ಟಲಿನೊ ನೇತೃತ್ವದಲ್ಲಿ ಕ್ರೆಡಾಯ್ ಮಂಗಳೂರು ಅಧ್ಯಕ್ಷ ವಿನೋದ್ ಪಿಂಟೋ. ನೋಟರಿ ಲ್ಯಾನಿ ಪಿಂಟೋ, ಸಾಮಾಜಿಕ ಕಾರ್ಯಕರ್ತೆ ಜೂಲಿಯೆಟ್ ಡಿಕುನ್ಹಾ ಉರ್ವಸ್ಟೋರ್, ಲಯನ್ಸ್ ಜಿಲ್ಲಾ ಗವರ್ನರ್ ಡಾ.ಮೆಲ್ವಿನ್ ಡಿಸೋಜ, ಬಿಲ್ಡರ್ ಗ್ರೆಗರಿ ಡಿಸಿಲ್ವಾ ಬೊಂದೇಲ್, ರೋಜರ್ ಪಿಂಟೊ ಕಿನ್ನಿಗೋಳಿ, ಉದ್ಯಮಿ ಅರುಣ್ ರೊಡ್ರಿಗಸ್ ಉರ್ವ, ಡೆನ್ನಿಸ್ ಸಲ್ಡಾನಾ ಉರ್ವ, ರಾಷ್ಟ್ರೀಯ ಕ್ರಿಸ್ತರ ವೇದಿಕೆ ಸ್ಥಾಪಕಾಧ್ಯಕ್ಷ ಪ್ರಾೃಂಕ್ಲಿನ್ ಮೊಂತೆರೋ ಪಾಲ್ಗೊಂಡಿದ್ದರು.


ಆರ್‌ಎಸ್‌ಎಸ್ ಪ್ರಾಂತ ಸಹ ಪ್ರಚಾರಕ ನಂದೀಶ್, ವಿಭಾಗ ಪ್ರಚಾರಕ್ ಸುರೇಶ್, ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಪ್ರವೀಣ್ ಕುಮಾರ್, ಉಪಾಧ್ಯಕ್ಷ ಸತೀಶ್ ಪ್ರಭು, ಪ್ರ.ಕಾರ್ಯದರ್ಶಿ ಸುರೇಶ್ ಕಾಮತ್, ಯೋಗೀಶ್ ಆಚಾರ್ಯ ಮೊದಲಾದವರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net