ಆಲ್ವಿನ್ ಜೆರೋಮ್ ಡಿಸೋಜ ಮೇಲೆ ಹಲ್ಲೆ ಪ್ರಕರಣ ಇಬ್ಬರು ಆರೋಪಿಗಳ ಬಂಧನ

mng--9 Oct mohammad athavulla
Published on

ಮಂಗಳೂರು: ಮರಳು ಮಾಫಿಯಾದ ವಿರುದ್ಧ ಹೋರಾಟ ನಡೆಸುತ್ತಿದ್ದ ಕೆಥೋಲಿಕ್ ಸಭಾ ಅಧ್ಯಕ್ಷ ಆಲ್ವಿನ್ ಜೆರೋಮ್ ಡಿಸೋಜ ಅವರ ಮೇಲೆ ಹಲ್ಲೆ ನಡೆಸಿದ ಇಬ್ಬರನ್ನು ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.


ಫರಂಗಿಪೇಟೆಯ ಕೋಡಿಮಜಲು ನಿವಾಸಿ ಮೊಹಮ್ಮದ್ ಅತಾವುಲ್ಲಾ (40) ಹಾಗೂ ಮಾರ್ನಮಿಕಟ್ಟೆಯ ತೌಸೀರ್ ಯಾನೆ ಪತ್ತೊಂಜಿ ತೌಚಿ (31) ಬಂಧಿತರು.


ಪಾವೂರು ದ್ವೀಪದ ಸುತ್ತ ಅಕ್ರಮ ಮರಳುಗಾರಿಕೆ ನಡೆಸುತ್ತಿರುವ ಬಗ್ಗೆ ಕೆಥೋಲಿಕ್ ಸಭಾ ನೇತೃತ್ವದಲ್ಲಿ ಸೆ.29ರಂದು ಪ್ರತಿಭಟನೆ ನಡೆದಿತ್ತು. ಅ.5ರಂದು ಪತ್ರಕರ್ತೆಯೊಬ್ಬರು ವರದಿ ಮಾಡಲು ಉಳಿಯ ದ್ವೀಪದ ಸ್ಥಳಕ್ಕೆ ಬಂದಿದ್ದಾಗ ಅಡ್ಯಾರ್ ಸೇತುವೆ ಬಳಿ ಅಡ್ಡ ಹಾಕಿದ್ದ ಮರಳು ದಂಧೆಕೋರರ ಪರವಾಗಿದ್ದ ಗುಂಪು ಆಲ್ವಿನ್ ಜೆರೋಮ್ ಡಿಸೋಜರಿಗೆ ಹಲ್ಲೆ ನಡೆಸಿತ್ತು.


ಈ ಸಂದರ್ಭ ಮೊಹಮ್ಮದ್ ಅತಾವುಲ್ಲಾ ಅವಾಚ್ಯವಾಗಿ ಬೈದು ಹಲ್ಲೆಗೆ ಪ್ರಚೋದನೆ ನೀಡಿದ್ದ. ತೌಸೀರ್ ಅವಾಚ್ಯವಾಗಿ ಬೈದು ಹಲ್ಲೆ ನಡೆಸಿ, ಜೀವ ಬೆದರಿಕೆ ಒಡ್ಡಿದ್ದ. ಈ ಬಗ್ಗೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆರೋಪಿಗಳನ್ನು ಬಂಧಿಸದಿದ್ದರೆ ಠಾಣೆ ಎದುರು ಪ್ರತಿಭಟನೆ ನಡೆಸುವ ಎಚ್ಚರಿಕೆಯನ್ನು ಕೆಥೋಲಿಕ್ ಸಭಾ ನೀಡಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net