

ಮಂಗಳೂರು: ಹೆಚ್ಚುತ್ತಿರುವ ಸೈಬರ್ ವಂಚನೆ ಹಾಗೂ ಮಾದಕ ದ್ರವ್ಯ ಸೇವನೆ ವಿರುದ್ಧ ಎಚ್ಚರ ವಹಿಸಬೇಕು ಎಂದು ಪೊಲೀಸ್ ಆಯುಕ್ತ ಅನುಪಮ್ ಅಗ್ರವಾಲ್ ಹೇಳಿದರು.
ಸೇಂಟ್ ಆಗ್ನೆಸ್ ಕಾಲೇಜಿನಲ್ಲಿ ಗುರುವಾರ ನಡೆದ ಕಾರ್ಪೋರೇಟ್ ದಿನಾಚರಣೆಯಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ಸ್ಪರ್ಧಾತ್ಮಕ ಜಗತ್ತಿನಲ್ಲಿ ಪ್ರಾಮಾಣಿಕತೆ ಹಾಗೂ ದಕ್ಷತೆಯನ್ನು ಮೈಗೂಡಿಸಿಕೊಳ್ಳಬೇಕೆಂದರು.
ಪಿಜಿ ಕೋ-ಆರ್ಡಿನೇಟರ್ ಡಾ. ವಿನೋರಾ ಎಸಿ ಸ್ವಾಗತಿಸಿದರು.
ಉಪಪ್ರಾಂಶುಪಾಲೆ ರೂಪಾ ರೋಡ್ರಿಗಸ್ ಎಸಿ, ರಿಜಿಸ್ಟ್ರಾರ್ ಶುಭರೇಖಾ, ಸಂಯೋಜಕರಾದ ಮಾಳವಿಕಾ ಶೆಟ್ಟಿ, ವಿವಿಧ ವಿಭಾಗಗಳ ಮುಖ್ಯಸ್ಥರು, ಡೀನ್‌ಗಳು ಮತ್ತು ಪ್ರಾಧ್ಯಾಪಕರುಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಅನನ್ಯಾ ಮಧು ಮತ್ತು ಐವಿನ್ ಸಿಕ್ವೇರಾ ನಿರೂಪಿಸಿದರು. ಯುಜಿ ವಿದ್ಯಾರ್ಥಿ ಸಂಘದ ಅಧ್ಯಕ್ಷೆ ಪ್ರಿವಿ ಡಿಸೋಜಾ ವಂದಿಸಿದರು.