ಸನಾತನ ಧರ್ಮದಲ್ಲಿ ಮಹಿಳೆಗೆ ಶ್ರೇಷ್ಠ ಸ್ಥಾನ ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಶೈಲಜಾ ಪುದುಕೋಳಿ ಅಭಿಮತ

mng--11 march sahakara Bharathi
Published on

ಮಂಗಳೂರು: ಮಹಿಳೆಯರು ಪ್ರಗತಿಯ ಸಂಕೇತ ಎಂದು ಸ್ವಾಮಿ ವಿವೇಕಾನಂದರು ಬಹಳ ಹಿಂದೆಯೇ ಮನಗಂಡಿದ್ದರು. ಮಹಿಳೆಯರು ಸಮಾಜಮುಖಿಯಾಗಿ ಕಾರ್ಯತತ್ಪರರಾಗಲು ವಿವೇಕಾನಂದರೆ ಸ್ಪೂರ್ತಿ. ಹೆಣ್ಣನ್ನು ಮಾತೆಯರು ಎಂದು ಗೌರವಿಸಿದ ಧರ್ಮವಿದ್ದರೆ ಅದು ಸನಾತನ ಧರ್ಮ ಎಂದು ಕೆನರಾ ಕಾಲೇಜಿನ ಕನ್ನಡ ಉಪನ್ಯಾಸಕಿ ಶೈಲಜಾ ಪುದುಕೋಳಿ ಹೇಳಿದರು.

ಸಹಕಾರ ಭಾರತಿ ಮಂಗಳೂರು ಮಹಾನಗರ ಜಿಲ್ಲೆಯ ಮಹಿಳಾ ಪ್ರಕೋಷ್ಠವು ಶನಿವಾರ ಆಯೋಜಿಸಿದ್ದ ಅಂ.ರಾ. ಮಹಿಳಾ ದಿನಾಚರಣೆಯಲ್ಲಿ ಅವರು ಮಾತನಾಡಿದರು.

ಮುಖ್ಯ ಅತಿಥಿಯಾಗಿದ್ದ ಸಹಕಾರ ಭಾರತಿ ರಾಷ್ಟ್ರೀಯ ಗ್ರಾಹಕ ಪ್ರಕೋಷ್ಠದ ಸಂಚಾಲಕಿ ಭಾರತಿ ಜಿ. ಭಟ್ ಮಾತನಾಡಿ, ಬುದ್ದಿವಂತಿಕೆ, ಸಾಮರ್ಥ್ಯ, ಧೈರ್ಯಗಳೆಂಬ ಶಸ್ತ್ರಗಳು ಬತ್ತಳಿಕೆಯಲ್ಲಿದ್ದರೆ ಮಹಿಳೆ ಅದ್ಭುತವನ್ನೇ ಸಾಧಿಸಬಲ್ಲಳು ಎಂಬುದಕ್ಕೆ ಅಹಲ್ಯಾಬಾಯಿ ಹೋಳ್ಕರ್ ಪ್ರತ್ಯಕ್ಷ ಸಾಕ್ಷಿ ಎಂದರು.

ಸಹಕಾರ ಭಾರತಿ ಮಂಗಳೂರು ಮಹಾನಗರ ಜಿಲ್ಲೆ ಮಹಿಳಾ ಪ್ರಮುಖ್ ಮದಲಾಕ್ಷಿ ರೈ ಅಧ್ಯಕ್ಷತೆ ವಹಿಸಿದ್ದರು.

* ಸಾಧಕರಿಗೆ ಸನ್ಮಾನ: ಮಂಗಳೂರಿನ ಪೃಥ್ವಿ ಚಾರಿಟೇಬಲ್ ಟ್ರಸ್ಟ್‌ನ ಟ್ರಸ್ಟಿ ಲೋಲಾಕ್ಷಿ ಫರ್ನಾಂಡಿಸ್, ರೋಶನಿ ನಿಲಯ ಕಾಲೇಜಿನ ನಿವೃತ್ತ ರಿಜಿಸ್ಟ್ರಾರ್ ವಿನುತಾ ರೈ ಅವರನ್ನು ಸನ್ಮಾನಿಸಲಾಯಿತು.

ಸಹಕಾರ ಭಾರತಿ ರಾಜ್ಯ ಕಾರ್ಯದರ್ಶಿ ಗಣೇಶ್ ಶೆಣೈ, ಸ.ಭಾರತಿ ಮಂಗಳೂರು ಮಹಾನಗರ ಜಿಲ್ಲೆಯ ಅಧ್ಯಕ್ಷ ಜಿ.ಆರ್.ಪ್ರಸಾದ್, ಕಾರ್ಯದರ್ಶಿ ಸೋಮಪ್ಪ ನಾಯ್ಕ, ಪ್ರ.ಕಾರ್ಯದರ್ಶಿ ಚರಣ್‌ರಾಜ್, ಉಪಾಧ್ಯಕ್ಷ ವೆಂಕಟೇಶ್, ಸದಸ್ಯ ಅರವಿಂದ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

ಸಹಕಾರ ಭಾರತಿ ಮಹಿಳಾ ಪ್ರ.ಕಾರ್ಯದರ್ಶಿ ಸುಜಯ ಹೇಮಚಂದ್ರ ಸ್ವಾಗತಿಸಿ, ಮಹಿಳಾಸಹ ಪ್ರಮುಖ್ ಪ್ರಭಾ ಮಾಲಿನಿ ವಂದಿಸಿದರು. ಮಹಾನಗರ ಜಿಲ್ಲಾ ಉಪಾಧ್ಯಕ್ಷೆ ಶಾಂತಾ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net