28ರಂದು ರೋಟರಿ ಮಂಗಳೂರು ಸೆಂಟ್ರಲ್ ಸಂಸ್ಥೆಯ ಆಶ್ರಯದಲ್ಲಿ ಜಿಲ್ಲಾ ಮಟ್ಟದ ರಸಪ್ರಶ್ನಾ ಸ್ಪರ್ಧಾಕೂಟ

quiz
Published on

ಮಂಗಳೂರು : ರೋಟರಿ ಮಂಗಳೂರು ಸೆಂಟ್ರಲ್ ಸಂಸ್ಥೆಯ ಆಶ್ರಯದಲ್ಲಿ ರೋಟರಿ ಮಾಹಿತಿ ಮತ್ತು ಜಾಗೃತಿ ಅಭಿಯಾನದ ಅಂಗವಾಗಿ ರೋಟರಿ ಜಿಲ್ಲಾ ಮಟ್ಟದ ವಾರ್ಷಿಕ ಅಂತರ ರೋಟರಿ ಕ್ಲಬ್ ಸ್ಪರ್ಧಾ ಕೂಟ ಫೆ.28 ರಂದು ನಗರದ ಹೋಟೇಲ್ ಮೋತಿ ಮಹಲ್ ಸಭಾಂಗಣದಲ್ಲಿ ರಾತ್ರಿ 8ಗಂಟೆಗೆ ಆಯೋಜಿಸಲಾಗಿದೆ.

ಈ ಸ್ಪರ್ಧಾ ಕೂಟವು ಕೇವಲ ರೋಟರಿ ಸಂಸ್ಥೆಯ ಆಡಳಿತ, ವಿಷಯ ಹಾಗೂ ಚಟುವಟಿಕೆಗಳ ಬಗ್ಗೆ ಜರಗಿಸಲಾಗುವುದು. ಮೈಸೂರು ನಗರ ಮೂಲದ ಖ್ಯಾತ ವಾಣಿಜೋದ್ಯಮಿ ಹಾಗೂ ಮಾಜಿ ರೋಟರಿ ಗವರ್ನರ್ ಗುರುರಾಜ್ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಸ್ಪರ್ಧಾ ಕೂಟದ ವಿಜೇತರಿಗೆ ರೋಟರಿ ಆಕರ್ಷಕ ಪ್ರಶಸ್ತಿ, ಪ್ರಮಾಣ ಪತ್ರ, ನಗದು ಬಹುಮಾನವನ್ನು ಹಸ್ತಾಂತರಿಸಲಿರುವರು. ವಲಯ ಸಹಾಯಕ ಗವರ್ನರ್ ಕೆ.ಎಂ. ಹೆಗ್ಡೆ ಅವರು ಗೌರವ ಅತಿಥಿಯಾಗಿ ಪಾಲ್ಗೊಂಡು ಸಂಸ್ಥೆಯ ವಾರ್ತಾ ಪತ್ರಿಕೆಯನ್ನು ಬಿಡುಗಡೆಗೊಳಿಸಲಿರುವರು. ಕ್ಲಬ್‌ನ ಅಧ್ಯಕ್ಷರಾದ ಬ್ರಿಯಾನ್ ಪಿಂಟೋ ಅಧ್ಯಕ್ಷತೆ ವಹಿಸುವರು.

ರೋಟರಿ ಜಿಲ್ಲಾ 3181 ಗೆ ಒಳಪಟ್ಟ ರೋಟರಿ ಕ್ಲಬ್‌ನ 2 ಸದಸ್ಯರನ್ನೊಳಗೊಂಡ ತಂಡದ ಹೆಸರನ್ನು ಫೆ.27 ರ ಒಳಗೆ ಉಚಿತವಾಗಿ ನೋಂದಾಯಿಸಬಹುದು. ಹೆಚ್ಚಿನ ಮಾಹಿತಿಗಾಗಿ ಸ್ಪರ್ಧಾಕೂಟ ನಿರೂಪಕರಾದ ಡಾ. ದೇವದಾಸ್ ರೈ ಅವರನ್ನು 98450 81145 ಮೂಲಕ ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net