ಅಂತರಾಷ್ಟ್ರೀಯ ರೋಟರಿ ಸಂಸ್ಥೆಯ ಸ್ಥಾಪನಾ ದಿನಾಚರಣೆ ಮೂವರು ಸಾಧಕರಿಗೆ ಶ್ರೇಷ್ಠ ವೃತ್ತಿಪರ ಸೇವಾ ಪ್ರಶಸ್ತಿ ಪ್ರದಾನ

mng--25 Feb Rotary award
Published on

ಮಂಗಳೂರು: ರೋಟರಿ ಕ್ಲಬ್ ಮಂಗಳೂರು ಸಿಟಿ ಸಂಸ್ಥೆಯ ಆಶ್ರಯದಲ್ಲಿ ಅಂತರಾಷ್ಟ್ರೀಯ ರೋಟರಿ ಸಂಸ್ಥೆಯ 121ನೇ ಸ್ಥಾಪನಾ ದಿನಾಚರಣೆ ಹಾಗೂ ಮೂವರು ಸಾಧಕರಿಗೆ ಶ್ರೇಷ್ಠ ವೃತ್ತಿಪರ ಸೇವಾ ಪ್ರಶಸ್ತಿ ಪ್ರಧಾನ ಕಾರ್ಯಕ್ರಮವು ನಗರದ ಆಫಿಸರ್ಸ್‌ ಕ್ಲಬ್ ಸಭಾಂಗಣದಲ್ಲಿ ಭಾನುವಾರ ಜರಗಿತು.

ಅಧ್ಯಕ್ಷ ಗಣೇಶ್ ಕೊಡ್ಲಮೊಗರು ಮಾತನಾಡಿ, ರೋಟರಿ ಸಂಸ್ಥೆಯ ವಾರ್ಷಿಕ ವೃತ್ತಿಪರ ಸೇವಾ ಯೋಜನೆಯ ಮಹತ್ವ ಮತ್ತು ಉದ್ದೇಶವನ್ನು ವಿವರಿಸಿ ಸಮಾಜಕ್ಕೆ ಉತ್ತಮ ಸೇವೆ ಮತ್ತು ನಿಸ್ವಾರ್ಥ ಸೇವಾ ಮನೋಭಾವದಿಂದ ಕೊಡುಗೆ ನೀಡಿದವರನ್ನು ಗುರುತಿಸಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ ಎಂದರು.

ಈ ಸಂದರ್ಭದಲ್ಲಿ ಮೂವರು ಸಾಧಕರಾದ ಸಚಿನ್ ಕರ್ಕೇರ (ಹೋಟೇಲ್ ಉದ್ಯಮ), ವಿಕ್ಟರ್ ಅಂದ್ರಾಡೆ (ಮುದ್ರಣ ತಂತ್ರಜ್ಞಾನ), ಮಹಮ್ಮದ್ ಯಾಸೀರ್ (ಅಮೂಲ್ಯ ಪ್ರಾಚೀನ ವಸ್ತುಗಳ ಸಂಗ್ರಹಣೆ) ಅವರ ಸಾಧಮೆ ಪರಿಗಣಿಸಿ ಪ್ರಶಸ್ತಿ ಪ್ರದಾನ ಮಾಡಿ ಅಭಿನಂದಿಸಲಾಯಿತು.

ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಭಾರತೀಯ ರಕ್ಷಣಾ ಪಡೆಯ ನಿವೃತ್ತ ಸೇನಾಧಿಕಾರಿ ಕರ್ನಲ್ ನಿತಿನ್ ಬಿಡೆ ಮಾತನಾಡಿ, ವಿಶ್ವದಲ್ಲಿ ಸಂಭವಿಸುವ ಘರ್ಷಣೆ ಅದನ್ನು ನಿವಾರಿಸಲು ವಿವಿಧ ಸಂಧಾನ, ಶಾಂತಿ ಸ್ಥಾಪನೆ ಯೋಜನೆಯ ಬಗ್ಗೆ ವಿವರಿಸಿ, ರೋಟರಿ ಸಂಸ್ಥೆಯ ಪ್ರಮಾಣಿಕ, ನಿಸ್ವಾರ್ಥ ಸೇವೆಯನ್ನು ಶ್ಲಾಘಿಸಿದರು.

ರೋಟರಿ ವಲಯ ಸಹಾಯಕ ಗವರ್ನರ್ ಅಶೋಕ್ ಕುಮಾರ್ ಗೌರವ ಅತಿಥಿಯಾಗಿದ್ದರು. ರೋಟರಿ ಸಂಸ್ಥೆಯು 1905 ರಲ್ಲಿ ಶಿಕಾಗೋ (ಅಮೆರಿಕಾ) ನಗರದಲ್ಲಿ ಸ್ಥಾಪನೆಗೊಂಡು ಅದರ ಇತಿಹಾಸ ಬೆಳವಣಿಗೆ ಮತ್ತು ವಿವಿಧ ಸೇವಾ ಸಾಧನೆಗಳ ಮಾಹಿತಿ ನೀಡಿದರು.

ನಿಯೋಜಿತ ಅಧ್ಯಕ್ಷ ಸನ್ನಿತ್ ಶೇಟ್ ಪ್ರಶಸ್ತಿ ವಿಜೇತರ ಪರಿಚಯ ಮತ್ತು ಸಾಧನೆಗಳ ವಿವರ ನೀಡಿದರು. ಸಂಸ್ಥೆಯ ಮಾಜಿ ಅಧ್ಯಕ್ಷ ಪ್ರಶಾಂತ್ ರೈ ಮತ್ತು ವೃತ್ತಿಪರ ಸೇವಾ ಯೋಜನೆಯ ನಿರ್ದೇಶಕ ಕ್ಯಾನುಟ್ ಪಿಂಟೋ ಉಪಸ್ಥಿತರಿದ್ದರು. ಕಾರ್ಯದರ್ಶಿ ಸುದೇಶ್ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net