ಪಂಪ್‌ವೆಲ್ ಸಮೀಪದ ಹಾರ್ಡ್‌ವೇರ್ ಅಂಗಡಿಯಿಂದ 4 ಲಕ್ಷ ರೂ. ಕಳವು

FIR-2
Published on


ಮಂಗಳೂರು : ನಗರದ ಪಂಪ್‌ವೆಲ್ ಸಮೀಪದ ಹಾರ್ಡ್‌ವೇರ್ ಅಂಗಡಿಯಿಂದ 4 ಲಕ್ಷ ರೂ. ಕಳವು ಮಾಡಲಾಗಿದೆ.


ಅಂಗಡಿಯ ಮಾಲೀಕರು ಆ.24ರಂದು ರಾತ್ರಿ 8ಕ್ಕೆ ಬಂದ್ ಮಾಡಿ ಹೋಗಿದ್ದರು. ಆ.26ರಂದು ಬೆಳಗ್ಗೆ 8.30ಕ್ಕೆ ಬಂದು ಅಂಗಡಿಯ ಬಾಗಿಲನ್ನು ತೆಗೆದು ನೋಡಿದಾಗ ಅಂಗಡಿಯ ಒಳಗೆ ಇಟ್ಟಿದ್ದ ಸುಮಾರು 4 ಲಕ್ಷ ರೂ. ನಗದು ಕಳವಾಗಿದೆ ಎಂದು ಮಂಗಳೂರು ಪೂರ್ವ ಠಾಣಾ ಪೊಲೀಸರಿಗೆ ದೂರು ನೀಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net