

ಮಂಗಳೂರು: ಕೇಂದ್ರ ಬಜೆಟ್ ವಿಕಸಿತ ಭಾರತಕ್ಕೆ ನಾಂದಿಯಾಗಿ ಅನೇಕ ದೂರಗಾಮಿ ಆರ್ಥಿಕ ಸಬಲತೆ ಹೊಂದಿದೆ ಎಂದು ಐಸಿಎಐ ಮಂಗಳೂರು ಮಾಜಿ ಅಧ್ಯಕ್ಷ ಸಿಎ ಎಸ್.ಎಸ್. ನಾಯಕ್ ವಿಶ್ಲೇಷಿಸಿದರು.
ಮಂಗಳೂರು ಪ್ರೊಡಕ್ಟಿವಿಟಿ ಕೌನ್ಸಿಲ್ ವತಿಯಿಂದ ಕೆನರಾ ಕಾಲೇಜು ಸಭಾಂಗಣದಲ್ಲಿ ಯೂನಿಯನ್ ಬಜೆಟ್ 2024 ವಿಶ್ಲೇಷಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
2024-25ರಲ್ಲಿ ಭಾರತದ ಆರ್ಥಿಕತೆಯ ಬೆಳವಣಿಗೆ ಶೇ 7ರಷ್ಟು ಹೊಂದಿ ಪ್ರಪಂಚದಲ್ಲಿಯೇ ಅತ್ಯಂತ ವೇಗವಾಗಿ ದಾಪುಗಾಲಿಡುತ್ತಿದೆ ವಿತ್ತೀಯ ಕೊರತೆ ಶೇ 4.9ರಷ್ಟು (24-25) ಅಂದಾಜಿಸಲಾಗಿದೆ. ಸತತ 7ನೇ ಬಾರಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಕೇಂದ್ರ ಬಜೆಟ್ ಮಂಡಿಸಿ ದಾಖಲೆ ನಿರ್ಮಿಸಿದ್ದಾರೆ. ಬಜೆಟ್ ಗಾತ್ರ ರೂಪಾಯಿ 48.21ಲಕ್ಷ ಕೋಟಿ ಎಂದು ಅಂದಾಜಿಸಲಾಗಿದೆ. ಬಜೆಟ್ ಗಾತ್ರದ ಶೇ.23.04ರಷ್ಟು ರೂಪಾಯಿ 11.11ಲಕ್ಷ ಕೋಟಿಯಷ್ಟು ಬಂಡವಾಳ ವೆಚ್ಚ, ರಕ್ಷಣಾ ವಲಯಕ್ಕೆ ರೂಪಾಯಿ 4.54ಲಕ್ಷ ಕೋಟಿ,ಗ್ರಾಮೀಣಾಭಿವೃದ್ಧಿಗೆ 2.65 ಲಕ್ಷ ಕೋಟಿ, ಕೃಷಿಗೆ 1.51 ಲಕ್ಷ ಕೋಟಿ, ಆರೋಗ್ಯಕ್ಕೆ 89000 ಕೋಟಿ, ಶಿಕ್ಷಣಕ್ಕೆ 1.25 ಲಕ್ಷ ಕೋಟಿ ಮೀಸಲಾಗಿಟ್ಟಿದೆ. ಉಔಐ ಠ್ಚಛಿಞಛಿ ಮುಖಾಂತರ ಉದ್ಯೋಗಕ್ಕೆ ಹೆಚ್ಚಿನ ಆದ್ಯತೆಗೆ ಗಮನವಿರಿಸಲಾಗಿದೆ. ಇದರಿಂದಾಗಿ 4.1ಲಕ್ಷ ಕೋಟಿ ಉದ್ಯೋಗಾವಕಾಶ ಹೆಚ್ಚಳವಾಗಲಿದೆ. ಮುದ್ರಾ ಯೋಜನೆ ಸಾಲ ಮಿತಿಯನ್ನು ರೂಪಾಯಿ 20ಲಕ್ಷಕ್ಕೆ ಹೆಚ್ಚಿಸಲಾಗಿದೆ. ಎಮ್ ಎಸ್ ಎಮ್ ಇ ವಲಯದ ಪುನಶ್ಚೇತನಕ್ಕೆ ಒತ್ತು ಕೊಡಲಾಗಿದೆ ಎಂದರು.
ಕರ್ಣಾಟಕ ಬ್ಯಾಂಕ್‌ನ ಡೆಪ್ಯುಟಿ ರೀಜನಲ್ ಹೆಡ್ ವಸಂತ್ ಅರ್ ಹೆರ್ಲೆ ಮುಖ್ಯ ಅತಿಥಿಯಾಗಿದ್ದರು. ಸಿಎ ಉತ್ತೀರ್ಣರಾದ ಸಿಎ ಸಹನಾ ಉಚ್ಚಿಲ , ಸಿಎ ರೊಯ್ದನ್ ಮಿನೇಜಸ್ , ಸಿಎ ಅಭಿಷೇಕ್ ಕಾಮತ್ , ಸಿಎ ಅನುಷ ಹೆಗ್ಡೆ , ಸಿಎ ಮೆಲ್ವಿನ್ ಜೊಸ್ವಿನ್ ಲೋಬೊ ಹಾಗೂ ಸಿಎ ಶಾಹುಲ್ ಹಮೀದ್ ಇವರನ್ನು ಸನ್ಮಾನಿಸಲಾಯಿತು.
ಎಂಪಿಸಿಯ ಕಾರ್ಯದರ್ಶಿ ಪಿ. ರವೀಂದ್ರ ರಾವ್ ಸ್ವಾಗತಿಸಿದರು. ಮಂಗಳೂರು ಪ್ರೊಡಕ್ಟಿವಿಟಿ ಕೌನ್ಸಿಲ್ ಅಧ್ಯಕ್ಷ ಯು. ರಾಮರಾವ್ ವಂದಿಸಿದರು. ಮಾನಸಾ ರಾವ್ ಕಾರ್ಯಕ್ರಮ ನಿರೂಪಿಸಿದರು.