ಪಿಯುಸಿ ವಿದ್ಯಾರ್ಥಿ ಆತ್ಮಹತ್ಯೆ

mng--25 Aug Harshad kaushal - Copy
Published on

ಮಂಗಳೂರು: ದ್ವಿತೀಯ ಪಿಯುಸಿ ವಿದ್ಯಾರ್ಥಿಯೋರ್ವ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಶಕ್ತಿನಗರ ನಾರ್ಲಪದವಿನಲ್ಲಿ ಗುರುವಾರ ಸಂಭವಿಸಿದೆ.


ಹರ್ಷದ್ ಕೌಶಲ್(17) ಮೃತಪಟ್ಟ ವಿದ್ಯಾರ್ಥಿ. ಈತ ನಗರದ ಖಾಸಗಿ ಕಾಲೇಜಿನಲ್ಲಿ ಓದುತ್ತಿದ್ದು ಪ್ರತಿಭಾವಂತನಾಗಿದ್ದ. ಕರಾಟೆ ಪಟವೂ ಆಗಿದ್ದ. ಗುರುವಾರ ಸಂಜೆ ಕಾಲೇಜಿನಿಂದ ಮನೆಗೆ ಬಂದಿದ್ದ ಕೌಶಲ್ ಆತ್ಮಹತ್ಯೆಗೆ ಶರಣಾಗಿದ್ದಾನೆ. ಮನೆಯ ಮೇಲಿನ ಅಂತಸ್ತಿನಲ್ಲಿ ಕೌಶಲ್ ಮಾತ್ರ ಇದ್ದ. ಕೆಳಗೆ ಆತನ ಅಜ್ಜಿ ಮತ್ತು ಸಂಬಂಧಿ ಹುಡುಗಿ ಇದ್ದರು. ತಾಯಿ ಮತ್ತು ತಂದೆ ಕೆಲಸಕ್ಕೆ ಹೋಗಿದ್ದರು. ಸಂಜೆ 5.30ರ ಸುಮಾರಿಗೆ ತಾಯಿ ಕೆಲಸದಲ್ಲಿಂದ ಮಗನಿಗೆ ಕರೆ ಮಾಡಿದ್ದರು. ಕೌಶಲ್ ಕರೆ ಸ್ವೀಕರಿಸಲಿಲ್ಲ. ತಾಯಿ ಕೂಡಲೇ ಹರ್ಷದ್‌ನ ಅಜ್ಜಿಗೆ ಕರೆ ಮಾಡಿ ತಿಳಿಸಿದರು. ಬಳಿಕ ಮಹಡಿಯ ಕೋಣೆಯಲ್ಲಿ ನೋಡಿದಾಗ ಆತ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದ. ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net