

ಮಂಗಳೂರು: ಕೆಪಿಟಿಸಿಎಲ್ ವತಿಯಿಂದ 220/ 110/ 11 ಕೆ.ವಿ, ಎಸ್‌ಆರ್‌ಎಸ್ ಕಾವೂರು ವಿದ್ಯುತ್ ಕೇಂದ್ರದಿಂದ ಹೊರಡುವ 11 ಕೆ.ವಿ. ವಿದ್ಯುತ್ ಮಾರ್ಗ ವ್ಯಾಪ್ತಿಯಲ್ಲಿ ಜೂ. 19ರಂದು ತುರ್ತು ನಿರ್ವಹಣಾ ಕಾಮಗಾರಿ ಹಮ್ಮಿಕೊಳ್ಳಲಾಗಿದ್ದು, ಅಂದು ಬೆಳಗ್ಗೆ 10 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ನಿರ್ದಿಷ್ಟ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.
11 ಕೆ.ವಿ. ಕೂಳೂರು, ದೇರೆಬೈಲ್, ಮರಕಡ, ಮುಲ್ಲಕಾಡು, ಮಾಲೆಮಾರ್, ಕುಂಜತ್ತಬೈಲ್ ಮತ್ತು ಚಿಲಿಂಬಿ ವಿದ್ಯುತ್ ಮಾರ್ಗಗಳಲ್ಲಿ ತುರ್ತು ನಿರ್ವಹಣಾ ಕಾಮಗಾರಿ ಹಮ್ಮಿಕೊಳ್ಳಲಾಗಿದೆ. ಈ ವ್ಯಾಪ್ತಿಯ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆ ನಡೆಯಲಿದೆ.
ಕೊಣಾಜೆ :
ಕೊಣಾಜೆ ಉಪಕೇಂದ್ರದಿಂದ ಹೊರಡುವ 11ಕೆ.ವಿ. ಕಿನ್ಯಾ, ಫೀಡರ್ ಹಾಗೂ 33/11 ಕೆ.ವಿ. ತೊಕ್ಕೊಟ್ಟು ಉಪಕೇಂದ್ರದಿಂದ ಹೊರಡುವ 11 ಕೆ.ವಿ. ಉಳ್ಳಾಲ, 11 ಕೆ.ವಿ. ಕೋಟೆಕಾರ್, 11 ಕೆ.ವಿ. ಕುತ್ತಾರ್, 11 ಕೆ.ವಿ. ಸೋಮೇಶ್ವರ, 11 ಕೆ.ವಿ. ಮಂಚಿಲ, 11 ಕೆ.ವಿ. ತೊಕ್ಕೊಟ್ಟು, 11 ಕೆ.ವಿ. ಅಬ್ಬಕ್ಕ ಮತ್ತು 11 ಕೆ.ವಿ. ಮೇಲಂಗಡಿ ಫೀಡರ್‌ಗಳಲ್ಲಿ ಜೂ. 19ರಂದು ಬೆಳಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ವ್ಯವಸ್ಥೆ ಸುಧಾರಣೆ ಮತ್ತು ತುರ್ತು ನಿರ್ವಹಣಾ ಕಾಮಗಾರಿ ಹಮ್ಮಿಕೊಳ್ಳಲಾಗಿದೆ.
ಆದ್ದರಿಂದ ಈ ಅವಧಿಯಲ್ಲಿ ಸಂಬಂಧಿಸಿದ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆಯಾಗಲಿದೆ.
ಉರ್ವಮಾರ್ಕೆಟ್:
ಉರ್ವಮಾರ್ಕೆಟ್ ಉಪಕೇಂದ್ರದಿಂದ ಹೊರಡುವ 11 ಕೆ.ವಿ. ಡೊಮಿನಿಕ್ ಚರ್ಚ್ ಫೀಡರ್‌ನಲ್ಲಿ ಜೂ. 20 ರಂದು ಬೆಳಗ್ಗೆ 10 ರಿಂದ ಸಂಜೆ 6 ಗಂಟೆಯವರೆಗೆ ಜಂಪರ್ ಬದಲಾವಣೆ ಹಾಗೂ ಜಿಓಎಸ್. ದುರಸ್ತಿ ಕಾಮಗಾರಿ ಹಮ್ಮಿಕೊಳ್ಳಲಾಗಿದೆ. ಆದ್ದರಿಂದ ಕೊಟ್ಟಾರ ಚೌಕಿ ಜೆ.ಬಿ ಲೋಬೋ ಏರಿಯಾ, ವಿವೇಕಾನಂದ ನಗರ, ಎಜೆ ಇಂಜಿನಿಯರಿಂಗ್ ಕಾಲೇಜ್ ಹತ್ತಿರ, ಜಿಂಜರ್ ಹೋಟೆಲ್ ಹತ್ತಿರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆ ಮಾಡಲಾಗುತ್ತದೆ.
ಕುಲಶೇಖರ:
ಕುಲಶೇಖರ ಉಪಕೇಂದ್ರದಿಂದ ಹೊರಡುವ 11 ಕೆ.ವಿ. ಶಕ್ತಿನಗರ ಫೀಡರ್‌ನಲ್ಲಿ ಜೂ.20 ರಂದು ಬೆಳಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ಜಂಪರ್ ಬದಲಾವಣೆ ಹಾಗೂ ಜಿಓಎಸ್ ದುರಸ್ತಿ ಕಾಮಗಾರಿ ಹಮ್ಮಿಕೊಳ್ಳಲಾಗಿದೆ. ಅದುದರಿಂದ ಕ್ಯಾಸ್ತಲಿನೊ ಕಾಲೋನಿ, ಕೊಂಗೂರು ಮಠ, ರಾಜೀವನಗರ, ಪಂಜಿರೆಲ್, ಬೊಲ್ಯಪದವು, ಶಕ್ತಿನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆ ಮಾಡಲಾಗುತ್ತದೆ.
ವಾಮಂಜೂರು:
ಕುಲಶೇಖರ ಉಪಕೇಂದ್ರದಿಂದ ಹೊರಡುವ 11 ಕೆ.ವಿ. ವಾಮಂಜೂರು ಫೀಡರ್‌ನಲ್ಲಿ ಜೂ.20 ರಂದು ಬೆಳಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ಜಂಪರ್ ಬದಲಾವಣೆ ಹಾಗೂ ಜಿಓಎಸ್ ದುರಸ್ತಿ ಕಾಮಗಾರಿ ಹಮ್ಮಿಕೊಳ್ಳಲಾಗಿದೆ. ಈ ಅವಧಿಯಲ್ಲಿ
ಪಚ್ಚನಾಡಿ, ದೇವಿನಗರ, ವಾಮಂಜೂರು, ಮಂಗಳನಗರ, ಅಮೃತನಗರ, ಕೆತ್ತಿಕಲ್ಲು, ಆರ್.ಟಿ.ಒ ಟೆಸ್ಟ್ ಯಾರ್ಡ್, ಸಂತೋಷನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆಯಾಗಲಿದೆ.
ಕಾಟಿಪಳ್ಳ:
ಕಾಟಿಪಳ್ಳ ವಿದ್ಯುತ್ ಉಪ ಕೇಂದ್ರದಿಂದ ಹೊರಡುವ 11 ಕೆ.ವಿ. ಸುರತ್ಕಲ್, ಕಾನ, ತಡಂಬೈಲ್, ಚೇಳಾರು, ಕುಡ್ಸೆಂಪ್ಮತ್ತು ಕಾಟಿಪಳ್ಳ ಫೀಡರ್ ಗಳಲ್ಲಿ ಜೂ.20 ರಂದು ಬೆಳಗ್ಗೆ 10 ರಿಂದ ಸಂಜೆ 4 ಗಂಟೆ ತನಕ ತುರ್ತು ನಿರ್ವಹಣಾ ಕಾಮಗಾರಿ ಹಮ್ಮಿಕೊಳ್ಳಲಾಗಿದೆ. ಅದುದರಿಂದ ಸುರತ್ಕಲ್, ಕಾನ, ಕಟ್ಲ, ತಡಂಬೈಲ್, ಮುಂಚೂರು, ಮುಕ್ಕ, ಸಸಿಹಿತ್ಲು, ಚೇಳ್ಯಾರು, ಮಧ್ಯ, 1ನೇ ಬ್ಲಾಕ್, 2ನೇ ಬ್ಲಾಕ್, 3ನೇ ಬ್ಲಾಕ್, 4ನೇ ಬ್ಲಾಕ್, 5ನೇ ಬ್ಲಾಕ್, 6ನೇ ಬ್ಲಾಕ್, 7ನೇ ಬ್ಲಾಕ್, 8ನೇ ಬ್ಲಾಕ್, 9ನೇ ಬ್ಲಾಕ್, ಚೊಕ್ಕಬೆಟ್ಟು, ಕೋಟೆ, ಕುತ್ತೆತ್ತೂರು, ಆದರ್ಶನಗರ, ರಾಜೀವನಗರ, ಸೂರಿಂಜೆ, ಶಿಬರೂರು, ಬಾಳ, ಮಂಗಳಪೇಟೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆ ಮಾಡಲಾಗುತ್ತದೆ ಎಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ