ಅಂಗನವಾಡಿಗಳಲ್ಲಿ ಪೋಷನ್ ಪಕ್ವಾಡ ಜಾಗೃತಿ ಕಾರ್ಯಕ್ರಮ

mng--15 April Suposhan
Published on

ಮಂಗಳೂರು: ಪ್ರೋಜೆಕ್ಟ್ ಸುಪೋಷನ್, ಅದಾನಿ ವಿಲ್ಮಾರ್ ಮತ್ತು ಅದಾನಿ ಫೌಂಡೇಶನ್ ಮಂಗಳೂರು ಇದರ ವತಿಯಿಂದ ಪೋಷನ್ ಪಕ್ವಾಡ 2025 ಪಡುಕೋಡಿ ಗ್ರಾಮದ ಮಂಜನಗುಡ್ಡೆ ಅಂಗನವಾಡಿಯಲ್ಲಿ ಜರುಗಿತು.

ಸುಪೋಷನ್ ಅಧಿಕಾರಿ ಡಾ.ಪ್ರೇಮಾ ಡಿಸೋಜ ಅವರು ಮಗುವಿನ 1 ಸಾವಿರ ದಿನಗಳ ಮಹತ್ವದ ಕುರಿತು ಹಾಗೂ ಪೌಷ್ಠಿಕ ಆಹಾರ ಸೇವನೆಯ ಮಹತ್ವದ ಬಗ್ಗೆ ಮಾಹಿತಿ ನೀಡಿದರು. ವ್ಯಾಪ್ತಿಯ ಹಲವು ಅಂಗನವಾಡಿ ಕೇಂದ್ರಗಳಲ್ಲಿ ಜಾಗೃತಿ ಕಾರ್ಯಕ್ರಮ ಏರ್ಪಡಿಸಲಾಯಿತು.

ಪೌಷ್ಠಿಕ ಆಹಾರದ ಅಡುಗೆ ಸ್ಪರ್ಧೆ ಏರ್ಪಡಿಸಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ರ‌್ಯಾಲಿ ಏರ್ಪಡಿಸಿ ಜನಜಾಗೃತಿ ಮೂಡಿಸಲಾಯಿತು.

ಬಾಲ ವಿಕಾಸ ಸಮಿತಿ ಸದಸ್ಯ ಭಾಸ್ಕರ ಆಚಾರ್ಯ, ಜಯಲಕ್ಷ್ಮೀ, ಅಂಗನವಾಡಿ ಕಾರ್ಯಕರ್ತೆ ಜಾನಕಿ ಎಂ., ಸುಪೋಷನ್ ಸಹಾಯಕ ಅಧಿಕಾರಿಗಳಾದ ಚೈತ್ರಾ ಮತ್ತು ರೋಶನಿ, ಸಂಗಿಣಿಯರಾದ ಸ್ಯಾಂಡ್ಲಿನ್ ಮರಿಯ ಮೊದಲಾದವರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net