

ಮಂಗಳೂರು: ಮಂಗಳೂರು ಪೊಲೀಸ್ ಕಮಿಷನರೆಟ್ ವ್ಯಾಪ್ತಿಯಲ್ಲಿ ಡ್ರಗ್ಸ್ ಮಾರಾಟ, ಸೇವನೆಗೆ ಸಂಬಂಧಿಸಿದಂತೆ 2023ನೇ ವರ್ಷದಲ್ಲಿ 713 ಪ್ರಕರಣಗಳನ್ನು ದಾಖಲಿಸಿ 948 ಮಂದಿಯನ್ನು ಬಂಧಿಸಲಾಗಿದೆ. ಒಟ್ಟು 1,71,11,700 ರೂ. ಮೌಲ್ಯದ ಡ್ರಗ್ಸ್ ವಶಪಡಿಸಿಕೊಳ್ಳಲಾಗಿದೆ.
51.74 ಲಕ್ಷ ರೂ. ಮೌಲ್ಯದ ಗಾಂಜಾ, 7,000 ರೂ. ಮೌಲ್ಯದ ಗಾಂಜಾ ವೀಡ್ ಆಯಿಲ್, 3,500 ರೂ. ಮೌಲ್ಯದ ಗಾಂಜಾ ಪೌಡರ್, 1.11 ಕೋಟಿ ರೂ. ಮೌಲ್ಯದ ಎಂಡಿಎಂಎ, 2.50 ಲಕ್ಷ ರೂ ಮೌಲ್ಯದ ಎಲ್‌ಎಸ್‌ಡಿ ಸ್ಟಾೃಂಪ್ಸ್, 3.39 ಲಕ್ಷ ರೂ. ಮೌಲ್ಯದ ಮೆಥಾಂಪೆಟಮಿನ್, 1.45 ಲಕ್ಷ ರೂ. ಮೌಲ್ಯದ ಚರಸ್, 750 ರೂ. ಮೌಲ್ಯದ ಹಾಶಿಸ್ ಆಯಿಲ್, 48,000 ರೂ. ಮೌಲ್ಯದ ಬಾಂಗ್ ಚಾಕೊಲೆಟ್‌ಗಳು ಇದರಲ್ಲಿ ಸೇರಿವೆ ಎಂದು ಮಂಗಳೂರು ಪೊಲೀಸ್ ಆಯುಕ್ತ ಅನುಪಮ್ ಅಗರ್‌ವಾಲ್ ತಿಳಿಸಿದ್ದಾರೆ.