ಸಮುದ್ರದಿಂದಲೇ ಮರಳೆತ್ತುವ ಖದೀಮರ ಅಡ್ಡೆಗೆ ದಾಳಿ

Published on

ಮಂಗಳೂರು: ಸೋಮೇಶ್ವರ ಉಚ್ಚಿಲದ ಕಡಲ ತೀರದಿಂದ ಅವ್ಯಾಹತವಾಗಿ ಸಮುದ್ರ ಮರಳನ್ನೇ ಸಾಗಾಟ ಮಾಡುತ್ತಿದ್ದ ಅಡ್ಡೆಯ ಮೇಲೆ ಮಂಗಳೂರು ಡಿಸಿಪಿ ಹರಿರಾಂ ಶಂಕರ್ ನೇತೃತ್ವದ ತಂಡ ದಾಳಿ ನಡೆಸಿದ್ದು ಇಬ್ಬರನ್ನು ಬಂಧಿಸಿದೆ.
ಎರಡು ಲಾರಿ, ಮೂರು ಬೈಕ್ ವಶಪಡಿಸಿಕೊಳ್ಳಲಾಗಿದೆ. ತಲಪಾಡಿಯ ರಾಯಲ್ ಡಿ’ಸೋಜ(21), ಕಲ್ಲಾಪುವಿನ ಮಯ್ಯದಿ ಎಂಬವರನ್ನು ಬಂಧಿಸಲಾಗಿದೆ. ಸ್ಥಳದಲ್ಲಿದ್ದ 8ಕ್ಕೂ ಅಧಿಕ ಮಂದಿ ತಪ್ಪಿಸಿಕೊಂಡಿದ್ದಾರೆ.
ಬಂಧಿತರು ನೀಡಿರುವ ಮಾಹಿತಿಯಂತೆ ಇಲ್ಯಾಸ್ ಕೆ.ಸಿ.ರೋಡ್, ಫಯಾಜ್, ನೌಶಾದ್ ಎಂಬವರ ವಿರುದ್ಧ ಉಳ್ಳಾಲ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net