ಯುನಿಸೆಕ್ಸ್ ಕಾನೂನು ಬಾಹಿರ ಚಟುವಟಿಕೆ ಕಠಿಣ ಕ್ರಮ

mng--5 Sep Anupam agarwal
Published on

ಮಂಗಳೂರು : ಯುನಿಸೆಕ್ಸ್ ಸೆಲೂನ್‌ಗಳಲ್ಲಿ ಕಾನೂನುಬಾಹಿರ ಚಟುವಟಿಕೆಗಳು ನಡೆದರೆ ಕಠಿನ ಕ್ರಮ ಕೈಗೊಳ್ಳಲಾಗುವುದು ಎಂದು ಮಂಗಳೂರು ಪೊಲೀಸ್ ಆಯುಕ್ತ ಅನುಪಮ್ ಅಗರ್‌ವಾಲ್ ಎಚ್ಚರಿಕೆ ನೀಡಿದ್ದಾರೆ.


ಕೆಲವು ಯುನಿಸೆಕ್ಸ್ ಸೆಲೂನ್‌ಗಳಲ್ಲಿ ಕಾನೂನುಬಾಹಿರ ಚಟುವಟಿಕೆಗಳು ನಡೆಯುತ್ತಿರುವ ಬಗ್ಗೆ ಕೆಲವು ದೂರುಗಳು ಬಂದಿವೆ. ಈ ಹಿನ್ನೆಲೆಯಲ್ಲಿ ನಗರದ 14 ಸೆಲೂನ್‌ಗಳಿಗೆ ದಿಢೀರ್ ಭೇಟಿ ನೀಡಿ ತಪಾಸಣೆ ನಡೆಸಲಾಗಿದೆ.


ಸೆಲೂನ್ ಮಾಲೀಕರು ತಮ್ಮ ಕೆಲಸಗಾರರ ಬಗ್ಗೆ ಪೊಲೀಸ್ ದೃಢೀಕರಣ ಪಡೆಯಬೇಕು. ಇದು ಪೊಲೀಸ್ ಇಲಾಖೆಯ ಉಚಿತ ಸೇವೆಯಾಗಿರುತ್ತದೆ. ಅಲ್ಲದೆ ರಿಸೆಪ್ಷನ್, ಪ್ರವೇಶ ಸ್ಥಳಗಳಲ್ಲಿ ಸಿಸಿ ಕೆಮರಾ ಅಳವಡಿಸಬೇಕು. ಎಲ್ಲ ಗ್ರಾಹಕರ ಮಾಹಿತಿ ದಾಖಲಿಸಿಕೊಳ್ಳಬೇಕು. ಸಂಬಂಧಿಸಿದ ಇತರ ಇಲಾಖೆಗಳ ಮಾರ್ಗಸೂಚಿಗಳನ್ನು ಪಾಲಿಸಬೇಕು. ಇಲ್ಲವಾದರಲ್ಲಿ ಕಾನೂನು ಪ್ರಕಾರ ಕಠಿನ ಕ್ರಮ ಕೈಗೊಳ್ಳಲಾಗುವುದು ಎಂದು ಆಯುಕ್ತರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net