

ಮಂಗಳೂರು: ಮಂಗಳೂರಿನ ಸಂಚಾರ ದಕ್ಷಿಣ ಠಾಣೆಯಲ್ಲಿ ಕಾನ್‌ಸ್ಟೆಬಲ್ ಆಗಿದ್ದ ಮಹೇಶ್(31) ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗುರುವಾರ ಬೆಳಕಿಗೆ ಬಂದಿದೆ.
ಮೂಲತಃ ಗದಗದವರಾದ ಮಹೇಶ್ ನಗರದ ಕಪಿತಾನಿಯೋದಲ್ಲಿ ಬಾಡಿಗೆ ಮನೆಯಲ್ಲಿ ಇನ್ನೋರ್ವ ಪೊಲೀಸ್ ಸಿಬಂದಿಯೊಂದಿಗೆ ವಾಸವಾಗಿದ್ದರು. ಮಧ್ಯಾಹ್ನ ವೇಳೆ ಬಾಡಿಗೆ ಕೋಣೆಯಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಅವರ ಮೃತದೇಹ ಪತ್ತೆಯಾಗಿದೆ. ಆತ್ಮಹತ್ಯೆಗೆ ಕಾರಣ ಗೊತ್ತಾಗಿಲ್ಲ. ಅವರ ಕುಟುಂಬ ಸದಸ್ಯರು ಆಗಮಿಸಿ ದೂರು ನೀಡಿದ ಅನಂತರ ಹೆಚ್ಚಿನ ಮಾಹಿತಿ ಸಿಗುವ ಸಾಧ್ಯತೆ ಇದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.