

ಮಂಗಳೂರು: ಅತ್ತಾವರ ಐವರಿ ಟವರ್ ನಿವಾಸಿ ಶರೀಫ್ ಎಂಬವರ ಪುತ್ರ ಶಹೀಮ್(20) ಬುಧವಾರ ಸಂಜೆ ಶಟ್ಲ್ ಆಡುತ್ತಿದ್ದಾಗ ಕುಸಿದು ಬಿಟ್ಟು ಮೃತಪಟ್ಟಿದ್ದಾರೆ.
ಎಂದಿನಂತೆ ಸಂಜೆ ಫಳ್ನೀರ್‌ನ ಪರ್ಫೆಕ್ಟ್ ಪಾಸ್ ಕೋರ್ಟ್‌ನಲ್ಲಿ ಗೆಳೆಯರ ಜತೆ ಆಟವಾಡುತ್ತಿರುವಾಗ ಕುಸಿದು ಬಿದ್ದಿದ್ದಾರೆ. ತಕ್ಷಣ ಆಸ್ಪತ್ರೆಗೆ ಕರೆತಂದರೂ, ಆತ ಅಷ್ಟರಲ್ಲೇ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದರು.
ಮೂಲತಃ ಅಡ್ಡೂರು ನಿವಾಸಿಯಾದ ಅವರ ಕುಟುಂಬ ಮಂಗಳೂರಿನಲ್ಲಿ ನೆಲೆಸಿದೆ. ತಂದೆ ವಿದೇಶದಲ್ಲಿದ್ದಾರೆ. ಮೃತ ಶಹೀಮ್ ಮಂಗಳೂರಿನ ಅಲೋಶಿಯಸ್ ಕಾಲೇಜಿನ ಪದವಿ ವಿದ್ಯಾರ್ಥಿ. ಒಳ್ಳೆಯ ಆಟಗಾರ. ಹೈಲ್ಯಾಂಡ್ ಇಸ್ಲಾಮಿಕ್ ಫೋರಮ್ ಸಂಘಟನೆ ಮೂಲಕ ಸೇವಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಚುರುಕಿನ ಯುವಕನಾಗಿದ್ದ. ಆರೋಗ್ಯವಂತನಾಗಿದ್ದ ಎಳೆಯ ಯುವಕ ಹಠಾತ್ ಮೃತಪಟ್ಟಿರುವುದು ಕುಟುಂಬ ಹಾಗೂ ಸ್ನೇಹಿತರಿಗೆ ಆಘಾತ ನೀಡಿದೆ.