

ಮಂಗಳೂರು: ಪದವಿನಂಗಡಿಯ ಪೇರ್ಲಗುರಿ ಶ್ರೀ ಪ್ರಸನ್ನ ಗಣಪತಿ ದೇವಸ್ಥಾನದಲ್ಲಿ ನಡೆಯುವ ಸಂಸ್ಕಾರ ತರಗತಿ ಒಂದು ವರ್ಷವನ್ನು ಪೂರೈಸಿದ ಶುಭ ಸಂದರ್ಭದಲ್ಲಿ ಶನಿವಾರ ವಿಶೇಷವಾಗಿ ಮಕ್ಕಳ ಶ್ರೇಯಸ್ಸಿಗಾಗಿ ಮಹಾಗಣಪತಿಯಲ್ಲಿ ಪ್ರಾರ್ಥಿಸಲಾಯಿತು.
ಅರ್ಚಕರಾದ ಶ್ರೀಧರ ಭಟ್ ಹಾಗೂ ಪುರೋಹಿತರಾದ ಶ್ರೀಕೃಷ್ಣ ಭಟ್ ಅವರು ಮಕ್ಕಳು ಇನ್ನಷ್ಟು ಕಲಿಯಬೇಕು ಮತ್ತು ಸಂಸ್ಕಾರವಂತರಾಗಬೇಕೆಂದು ಹರಸಿದರು. ಗುರುಗಳಾದ ಚೇತನ ಶ್ರೀಕೃಷ್ಣಭಟ್, ಮಕ್ಕಳು ಹಾಗೂ ಪೋಷಕರು ಉಪಸ್ಥಿತರಿದ್ದರು.