

ಮಂಗಳೂರು: ನೀರುಮಾರ್ಗ ಶ್ರೀ ಕ್ಷೇತ್ರ ಪೆದಮಲೆ ಶ್ರೀ ವಾಜಿಲ್ಲಾಯ ಧೂಮಾವತಿ ದೈವಸ್ಥಾನದ ನೂತನ ಭಂಡಾರ ಮನೆಗೆ ಕುಡುಪು ಶ್ರೀ ಕೃಷ್ಣರಾಜ ತಂತ್ರಿ ನೇತೃತ್ವದಲ್ಲಿ ಬುಧವಾರ ಶಿಲಾನ್ಯಾಸ ನೆರವೇರಿಸಲಾಯಿತು.
ಊರಿನ ಹಿರಿಯರಾದ ಪೆದಮಲೆ ರಾಮಣ್ಣ ಶೆಟ್ಟಿ ಅವರು ಭಂಡಾರ ಮನೆಗೆ ಭೂಮಿಯನ್ನು ದಾನವಾಗಿ ನೀಡಿದ್ದಾರೆ. ಶ್ರೀ ವಾಜಿಲ್ಲಾಯ ಧೂಮಾವತಿ ದೈವಸ್ಥಾನ ಟ್ರಸ್ಟ್‌ನ ಗೌರವಾಧ್ಯಕ್ಷ ಭಾಸ್ಕರ ಕೆ., ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಮನೋಜ್ ಸರಿಪಲ್ಲ, ಟ್ರಸ್ಟ್‌ನ ಅಧ್ಯಕ್ಷ ಗಿರಿಧರ್ ಶೆಟ್ಟಿ, ಪೆದಮಲೆ ಕ್ಷೇತ್ರದ ಕಾರ್ಯಾಧ್ಯಕ್ಷ ಆನಂದ್ ಸರಿಪಲ್ಲ, ಶ್ರೀ ಉಮಾಮಹೇಶ್ವರ ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ಶೇಷಾದ್ರಿ ಭಟ್, ಸಿ.ಕೆ.ರವಿಪ್ರಸನ್ನ ಭಟ್, ಎ.ವಿಶ್ವನಾಥ್, ಉದಯ್ ಶೆಟ್ಟಿ, ಸಮಿತಿ ಹಾಗೂ ಟ್ರಸ್ಟ್‌ನ ಸದಸ್ಯರು, ಸ್ಥಳೀಯರು ಪಾಲ್ಗೊಂಡಿದ್ದರು.