

ಮಂಗಳೂರು: ಪೆದಮಲೆ ಶ್ರೀ ವಾಜಿಲ್ಲಾಯ ಧೂಮಾವತಿ ದೈವಸ್ಥಾನದ ಪ್ರತಿಷ್ಠಾ ಕಲಶೋತ್ಸವ ಫೆ.16ರಿಂದ 22 ರವರೆಗೆ ನಡೆಯಲಿದ್ದು, ಇದರ ಅಂಗವಾಗಿ ವಿವಿಧ ಕಡೆಯಿಂದ ಆಗಮಿಸಿದ ಹಸಿರು ಹೊರೆಕಾಣಿಕೆ ಮೆರವಣಿಗೆ ಕುಡುಪು ಅನಂತಪದ್ಮನಾಭ ಕ್ಷೇತ್ರದಿಂದ ಭಾನುವಾರ ನಡೆಯಿತು.
ಸಂಜೆ ಕುಡುಪು ಅನಂತಪದ್ಮನಾಭ ದೇವಸ್ಥಾನದ ತಂತ್ರಿಗಳಾದ ಶ್ರೀ ನರಸಿಂಹ ತಂತ್ರಿ ಅವರು ಹೊರೆಕಾಣಿಕೆ ಮೆರವಣಿಗೆಯನ್ನು ದೀಪಬೆಳಗಿಸಿ ಉದ್ಘಾಟಿಸಿದರು.
ವೈಭವದ ಮೆರವಣಿಗೆ: ಕುಡುಪು ಕ್ಷೇತ್ರದಿಂದ ವೈಭವದ ಮೆರವಣಿಗೆ ಹೊರಟಿತು. ಚೆಂಡೆ, ವಾದ್ಯಘೋಷ ತಂಡ, ಸಾಲು ಸಾಲು ವಾಹನಗಳು ಹಸಿರು ಹೊರೆಕಾಣಿಗೆ ತುಂಬಿದ ವಾಹನಗಳು, ಸ್ಟೀಲ್ ಅಲ್ಯುಮೀನಿಯಂ ಸೇರಿದಂತೆ ವಿವಿಧ ಪಾತ್ರೆಗಳು ಮೆರವಣಿಗೆಗೆ ಮೆರುಗು ನೀಡಿದ್ದವು. ಕುಡುಪು ಕ್ಷೇತ್ರದಿಂದ ಹೊರಟ ಮೆರವಣಿಗೆ ಕುಡುಪು ಕಟ್ಟೆ, ಬೈತುರ್ಲಿ, ಪಾಲ್ದನೆ, ಭಟ್ರಕೋಡಿ ಮಾರ್ಗವಾಗಿ ಶ್ರೀ ಕ್ಷೇತ್ರಕ್ಕೆ ತಲುಪಿತು.
ಈ ಸಂದರ್ಭ ವಾಮಂಜೂರು ಆಮೃತೇಶ್ವರ ದೇವಸ್ಥಾನದ ಅಧ್ಯಕ್ಷ ಚಂದ್ರಹಾಸ್ ರೈ, ಉಮೇಶ್ ರೈ ಮೇಗಿನಮನೆ, ನೀರುಮಾರ್ಗ ಗ್ರಾ.ಪಂ. ಅದ್ಯಕ್ಷ ಶ್ರೀಧರ್, ಕಾರ್ಪೊರೇಟರ್ ರೂಪಶ್ರೀ, ಹೊರೆಕಾಣಿಕೆ ಸಮಿತಿ ಸಂಚಾಲಕ ಏಕನಾಥ ಕುಲಶೇಖರ, ಶ್ರೀ ವಾಜಿಲ್ಲಾಯ ಧೂಮಾವತಿ ದೈವಸ್ಥಾನದ ಟ್ರಸ್ಟ್ ಅಧ್ಯಕ್ಷ ಗಿರಿಧರ್ ಶೆಟ್ಟಿ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಮನೋಜ್ ಸರಿಪಲ್ಲ, ಕ್ಷೇತ್ರದ ಟ್ರಸ್ಟ್ ಕಾರ್ಯಾಧ್ಯಕ್ಷ ಆನಂದ ಸರಿಪಲ್ಲ, ಟ್ರಸ್ಟ್ ಗೌರವಾಧ್ಯಕ್ಷ ಭಾಸ್ಕರ್ ಕೆ., ಟ್ರಸ್ಟಿಗಳಾದ ಭಟ್ರಕೋಡಿ ವೆಂಕಟಕೃಷ್ಣ ಭಟ್, ಏಕನಾಥ್ ಕುಲಶೇಖರ, ಶೇಷಾದ್ರಿ ಭಟ್, ಕಿಶೋರ್ ಕುಮಾರ್ ನೀರುಮಾರ್ಗ, ನಾಗೇಶ್ ನೀರುಮಾರ್ಗ, ಮಹೇಶ್ ಚೌಟ, ವಿಶ್ವನಾಥ ಎ., ಪುಷ್ಪರಾಜ್ ಪೂಜಾರಿ ಕುಲಶೇಖರ, ಉದಯ ಶೆಟ್ಟಿ, ಉಮೇಶ್ ಸರಿಪಲ್ಲ, ಚೇತನ್ ಪ್ರಮುಖರಾದ ಸುಜನ್ ದಾಸ್ ಕುಡುಪು, ರಾಮ್ ಪ್ರಸಾದ್, ಧನವಂತಿ ಸರಿಪಲ್ಲ, ಪ್ರತಾಪ್ ಶೆಟ್ಟಿ, ರಾಕೇಶ್ ಕೋಟ್ಯಾನ್, ಹರೀಶ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.
ವಿಜಯ್ ಕೋಟ್ಯಾನ್ ಪಡು, ಕೀರ್ತಿರಾಜ್ ಕಾರ್ಯಕ್ರಮ ನಿರೂಪಿಸಿದರು.