ಪಾರ್ವತಿ ವಸಂತ ಕುಮಾರ್ ಕೋಟೆ ನಿಧನ

mng--23 Nov Parvathi kote
Published on

ಮಂಗಳೂರು: ಸುಳ್ಯ ತಾಲೂಕು ಕಳಂಜ ಗ್ರಾಮದ ಸಹಕಾರಿ, ರಾಜಕೀಯ ಧಾರ್ಮಿಕ, ಸಾಮಾಜಿಕ ಧುರೀಣರಾಗಿದ್ದ ದಿ.ಕೋಟೆ ವಸಂತ ಕುಮಾರ್ ಅವರ ಪತ್ನಿ ಪಾರ್ವತಿ ಕೋಟೆ (81) ಶನಿವಾರ ಅಲ್ಪ ಕಾಲದ ಅಸೌಖ್ಯದಿಂದ ನಿಧನ ಹೊಂದಿದರು.

ಪೆರುವಾಜೆಯಲ್ಲಿ ಪುತ್ರಿಯ ಮನೆಯಲ್ಲಿದ್ದ ಸಂದರ್ಭದಲ್ಲಿ ಅಸೌಖ್ಯಕ್ಕೊಳಗಾಗಿದ್ದು, ಅವರನ್ನು ಅಳಿಯ ಗಣಪಯ್ಯ ಅವರು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದ ವೇಳೆ ದಾರಿ ಮಧ್ಯೆ ನಿಧನರಾದರು. ಮೃತರು ಗಾಯಕ ಶಶಿಧರ್ ಕೋಟೆ, ಉದ್ಯಮಿ ರಘುರಾಮ ಕೋಟೆ ಹಾಗೂ ಪುತ್ರಿ ಶಶಿಕಲಾ, ಸೊಸೆಯಂದಿರು, ಮೊಮ್ಮಕ್ಕಳನ್ನು ಅಗಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net