

ಮಂಗಳೂರು, : ನಗರದ ಪಾಂಡೇಶ್ವರದ ರೊಜಾರಿಯೋ ಚರ್ಚ್ ರಸ್ತೆಯ ಮನೆಯೊಂದರಲ್ಲಿ ಕಳ್ಳತನ ನಡೆದಿದೆ.
ಮನೆಯವರು ಜೂ.11ರಂದು ಅಮೆರಿಕಾಕ್ಕೆ ತೆರಳಿದ್ದರು. ಮನೆಯ ಯಜಮಾನನ ಸಹೋದರ ಜು.31ರಂದು ಸಂಜೆ 4.30ಕ್ಕೆ ಬಂದು ಪರಿಶೀಲಿಸಿ ತೆರಳಿದ್ದರು. ಆ.1ರಂದು ಮನೆಯ ಯಜಮಾನರು ಬಂದು ನೋಡಿದಾಗ ಮನೆಯ ಎರಡು ಬೆಡ್‌ರೂಮ್‌ಗಳ ಕಪಾಟುಗಳಲ್ಲಿ ಇದ್ದ ಸೊತ್ತುಗಳು ಚೆಲ್ಲಾಪಿಲ್ಲಿಯಾಗ್ದಿವು. 1 ಲ್ಯಾಪ್‌ಟಾಪ್, 1 ಟಾಬ್ಲೆಟ್, ಬೆಳ್ಳಿಯ ಸಾಮಗ್ರಿಗಳು, ದೇವರ ಮೂರ್ತಿಗಳು, ತಾಮ್ರದ ಪಾತ್ರೆಗಳು, ಕೆಮರಾ ಮೊದಲಾದ ಅಂದಾಜು 1 ಲ.ರೂ. ಮೌಲ್ಯದ ಸೊತ್ತುಗಳನ್ನು ಕಳವು ಮಾಡಿರುವುದು ಗೊತ್ತಾಗಿದೆ. ಮಂಗಳೂರು ದಕ್ಷಿಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.