

ಮಂಗಳೂರು : ಪಾಂಡೇಶ್ವರ ಅಗ್ನಿಶಾಮಕ ಠಾಣೆಯ ಕೃಷ್ಣ ಹಾಂಡ ಅವರಿಗೆ 2024ನೇ ಸಾಲಿನ ಮುಖ್ಯಮಂತ್ರಿ ಪದಕವನ್ನು ಗೃಹಸಚಿವ ಡಾ.ಜಿ.ಪರಮೇಶ್ವರ್ ಬೆಂಗಳೂರಿನಲ್ಲಿ ನಡೆದ ಸಮಾರಂಭದಲ್ಲಿ ಪ್ರದಾನ ಮಾಡಿದರು.
ಶಿವಮೊಗ್ಗ, ಉಡುಪಿ ಸೇರಿದಂತೆ ರಾಜ್ಯದ ಹಲವು ಕಡೆಗಳಲ್ಲಿ ಹಾಂಡ ಅವರು ಸೇವೆ ಸಲ್ಲಿಸಿದ್ದಾರೆ. ಕುಂದಾಪುರ ಹೈಕಾಡಿ ಬಾವಣೆ ಹಿಲಿಯಾಣ ಗ್ರಾಮದ ದಿ. ರಾಮ ಹಾಂಡ ಮತ್ತು ಅಕ್ಕು ದಂಪತಿಯ ಸುಪುತ್ರ.
ಅಗ್ನಿ ಅವಘಡ ಮತ್ತು ವಿಪತ್ತುಗಳಂತಹ ತುರ್ತು ಸಂದರ್ಭದಲ್ಲಿ ಸವಾಲನ್ನು ಎದುರಿಸಿ ಹೋರಾಟ ಮಾಡಿ ನಾಗರಿಕರ ಜೀವರಕ್ಷಣೆ ಹಾಗೂ ಆಸ್ತಿ ಸಂರಕ್ಷಣಾ ಕಾರ್ಯದಲ್ಲಿ ಉನ್ನತ ಸೇವೆ ಸಲ್ಲಿಸಿರುವುದನ್ನು ಪರಿಗಣಿಸಿ ಅವರಿಗೆ ಸಿಎಂ ಪದಕ ನೀಡಿ ಗೌರವಿಸಲಾಗಿದೆ.