ಪದವಿನಂಗಡಿ ಪೇರ್ಲಗುರಿ ಶ್ರೀ ಪ್ರಸನ್ನ ಗಣಪತಿ ದೇವಳದಲ್ಲಿ ಶಾರದಾ ಪೂಜೆ

mng--12 oct Perlaguri sharada
Published on

ಮಂಗಳೂರು: ಪದವಿನಂಗಡಿಯ ಪೇರ್ಲಗುರಿ ಶ್ರೀ ಪ್ರಸನ್ನ ಗಣಪತಿ ದೇವಸ್ಥಾನದಲ್ಲಿ ಶುಕ್ರವಾರ ಕಿಶೋರ ಸಿಂಧು ಮಕ್ಕಳ ತರಗತಿ ಇದರ ವತಿಯಿಂದ ಶ್ರೀ ಶಾರದಾ ಪೂಜೆ ಜರುಗಿತು.


ಪ್ರಾರ್ಥನೆ, ಶ್ರೀ ಪ್ರಸನ್ನ ಗಣಪತಿ ದೇವರಿಗೆ ಪೂಜೆ, ತರಗತಿ ಮಕ್ಕಳಿಂದ ಶ್ಲೋಕ, ಭಜನೆ, ಭಗವದ್ಗೀತೆ ಪಾರಾಯಣ ನಡೆದು ಮಹಾ ಮಂಗಳಾರತಿ ಜರುಗಿತು. ಪುರೋಹಿತ ಶ್ರೀಕೃಷ್ಣ ಭಟ್ ಅವರ ನೇತೃತ್ವದಲ್ಲಿ ಪೂಜಾ ಕಾರ್ಯಕ್ರಮ ನೆರವೇರಿತು. ಗುರು ಚೇತನಾ ಶ್ರೀಕೃಷ್ಣ ಭಟ್, ಪೋಷಕರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net