ಪದವಿನಂಗಡಿ ಗುರುವಂದನಾ ಕಾರ್ಯಕ್ರಮ

mng--28 july padavinangadi guruvandane
Published on

ಮಂಗಳೂರು: ಪದವಿನಂಗಡಿ ಪೇರ್ಲಗುರಿ ಪ್ರಸನ್ನಗಣಪತಿ ದೇವಸ್ಥಾನದಲ್ಲಿ ಬಾಲ ಸಂಸ್ಕಾರ ತರಗತಿ ವತಿಯಿಂದ ಶನಿವಾರ ಗುರುವಂದನಾ ಕಾರ್ಯಕ್ರಮ ಜರುಗಿತು.


ದೇವಸ್ಥಾನದ ಅರ್ಚಕ ಶ್ರೀಧರ ಭಟ್ ಅವರಿಗೆ ಗುರು ಕಾಣಿಕೆ ಹಾಗೂ ಗುರು ಚೇತನಾ ಶ್ರೀಕೃಷ್ಣ ಭಟ್ ಅವರಿಗೆ ಗುರುವಂದನೆ ಸಲ್ಲಿಸಲಾಯಿತು.
ಪ್ರತಿ ಕಾರ್ಯಕ್ರಮದ ಚಿತ್ರೀಕರಣದಲ್ಲಿ ಸಹಕರಿಸುತ್ತಿರುವ ನವ್ಯಾ ಅವರನ್ನು ವಿಶೇಷವಾಗಿ ಗೌರವಿಸಲಾಯಿತು.


ಈ ಸಂದರ್ಭ ಬಾಲ ಸಂಸ್ಕಾರ ಕೇಂದ್ರದ ಮಕ್ಕಳು ಶ್ಲೋಕ, ಭಜನೆ ಹಾಗೂ ತರಗತಿಯ ಬಗ್ಗೆ ಅನಿಸಿಕೆ ವ್ಯಕ್ತಪಡಿಸಿದರು. ಭೂಮಿಕಾ ಸುನಿಲ್ ಸ್ವಾಗತಿಸಿದರು. ಅಂಗನವಾಡಿ ಶಿಕ್ಷಕಿ ಲೋಲಾಕ್ಷಿ ವಂದಿಸಿದರು. ಚಮನ್ ಕಾರ್ಯಕ್ರಮ ನಿರೂಪಿಸಿದರು. ವ್ನಿೇಶ್ ಪ್ರಭು ಕುಟುಂಬದವರಿಂದ ಫಲಾಹಾರ ವ್ಯವಸ್ಥೆ ಮಾಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net