ಆನ್‌ಲೈನ್ ಹೂಡಿಕೆ ಹೆಸರಲ್ಲಿ ಮಹಿಳೆಯೋರ್ವರಿಗೆ 15.27 ಲಕ್ಷ ರೂ. ವಂಚನೆ

Fruad
Published on

ಮಂಗಳೂರು: ಆನ್‌ಲೈನ್ ಟ್ರೇಡಿಂಗ್‌ನಲ್ಲಿ ಹೂಡಿಕೆ ಹೆಸರಿನಲ್ಲಿ ಮಹಿಳೆಯೋರ್ವರಿಗೆ 15.27 ಲಕ್ಷ ರೂ. ವಂಚಿಸಿರುವ ಬಗ್ಗೆ ಪ್ರಕರಣ ದಾಖಲಾಗಿದೆ.

ಮಹಿಳೆಯ ಫೇಸ್‌ಬುಕ್‌ಗೆ ಆನ್‌ಲೈನ್ ಟ್ರೇಡಿಂಗ್‌ನ ಮಾಹಿತಿಯುಳ್ಳ ಮೆಸೇಜ್ ಬಂದಿತ್ತು. ಅದರಲ್ಲಿ 6205468308 ಮೊಬೈಲ್ ಸಂಖ್ಯೆ ಇತ್ತು. ಅದನ್ನು ಮಹಿಳೆ ಸಂಪರ್ಕಿಸಿದಾಗ ಅವರ ವಾಟ್ಸ್‌ಆ್ಯಪ್‌ಗೆ ಲಿಂಕ್ ಬಂದಿತ್ತು. ಆ ಲಿಂಕ್‌ನ್ನು ತೆರೆದಾಗ ಅವರಿಗೆ ಆನ್‌ಲೈನ್ ಟ್ರೇಡಿಂಗ್ ಹಾಗೂ ಲಾಭದ ಆಮಿಷ ನೀಡಲಾಗಿತ್ತು. ಅದನ್ನು ನಂಬಿದ ಮಹಿಳೆ ಹಂತ ಹಂತವಾಗಿ 15,27,535 ರೂ.ಗಳನ್ನು ಹೂಡಿಕೆ ಮಾಡಿದ್ದರು. ಅದನ್ನು ವಾಪಸ್ ಪಡೆಯಲು ಯತ್ನಿಸಿದಾಗ ಇನ್ನೂ ಹೆಚ್ಚುವರಿಯಾಗಿ 5 ಲ.ರೂಗಳನ್ನು ಹೂಡಿಕೆ ಮಾಡುವಂತೆ ತಿಳಿಸಲಾಯಿತು. ತನ್ನ ಬಳಿ ಅಷ್ಟು ಹಣವಿಲ್ಲದ ಕಾರಣ ಮಹಿಳೆ ತನ್ನ ಮನೆಯವರಲ್ಲಿ ಆ ಹಣ ಕೇಳಿದರು. ಆಗ ಮನೆ ಮಂದಿ ಪರಿಶೀಲನೆ ನಡೆಸಿದಾಗ ಆಕೆಗೆ ನಕಲಿ ಟ್ರೇಡಿಂಗ್ ಆ್ಯಪ್ ಮೂಲಕ ಮಾಯಾಂಕ್ ಸಿಂಗ್ ಚಾಂದೇಲ್ ಮತ್ತು ರಜನಿಕಾಂತ್ ಥ್ಯಾಕರ್ ಎಂಬವರು ವಂಚನೆ ಮಾಡಿರುವುದು ಗೊತ್ತಾಗಿದೆ. ಈ ಬಗ್ಗೆ ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net