

ಮಂಗಳೂರು: ಕನಿಲೆ ಗಸಿ, ಪತ್ರೊಡೆ, ತಜಂಕ್ ಸುಕ್ಕ, ಬಾಳೆ ಹೂ ಪಲ್ಯ, ಮರುವಾಯಿ ಸುಕ್ಕ, ಏಡಿ ಸುಕ್ಕ, 50ಕ್ಕೂ ಅಧಿಕ ಬಗೆ ಬಗೆಯ ಸಾಂಪ್ರದಾಯಿಕ ಸಿಹಿ ತಿನಿಸುಗಳು…
ಇದು ಬಂದರು ಪೊಲೀಸ್ ಠಾಣೆಯಲ್ಲಿ ಭಾನುವಾರ ಆಟಿಕೂಟದ ಸಂಭ್ರಮದಲ್ಲಿ ಕಂಡು ಬಂದ ದೃಶ್ಯ. ಈ ಪೊಲೀಸ್ ಠಾಣೆಯ ಸಿಬ್ಬಂದಿಯೇ ಅಡುಗೆ ಮಾಡಿ ತಂದು ಆಟಿಕೂಟದ ಮೆರುಗು ಹೆಚ್ಚಿಸಿದರು. ಬಂದರು ಠಾಣಾಧಿಕಾರಿ ಅಜ್ಮತ್ ಆಲಿ ಅವರ ಮುತುವರ್ಜಿಯಲ್ಲಿ ಆಟಿಕೂಟ ಆಯೋಜಿಸಲಾಗಿತ್ತು. ಅಜ್ಮತ್ ಆಲಿ ಅವರ ಎರಡು ವರ್ಷದ ಪುಟಾಣಿ ಹಾಜಿರಾ ಶಜ್ನಾ ಅವರು ಆಟಿಕೂಟ ಚಾಲನೆನೀಡಿದರು.
ತುಳುನಾಡಿನ ಸಾಂಪ್ರದಾಯಿಕ ಸುಮಾರು 50ಕ್ಕೂ ಅಧಿಕ ತಿನಿಸುಗಳನ್ನು ಒಪ್ಪಓರಣವಾಗಿ ಠಾಣೆಯ ಸಭಾಂಗಣದಲ್ಲಿ ಪೇರಿಸಿಟ್ಟು ಮಧ್ಯಾಹ್ನ ಎಲ್ಲ ಅಧಿಕಾರಿಗಳು ಹಾಗೂ ಸಿಬ್ಬಂದಿ ಹಾಗೂ ಕುಟುಂಬಿಕರು ಆಟಿಕೂಟದಲ್ಲಿ ಭಾಗಿಯಾಗಿ ಸಂಭ್ರಮಿಸಿದರು. ಕರಾವಳಿಯ ಸಾಂಪ್ರದಾಯಿಕ
ಖಾದ್ಯಗಳನ್ನು ಸವಿದು ಖುಷಿಪಟ್ಟರು. ಈ ಠಾಣೆಯಲ್ಲಿ ಕಳೆದ ವರ್ಷದಿಂದ ಆಟಿಕೂಟ ಆಯೋಜಿಸಲಾಗುತ್ತಿದೆ.