ಕೂಳೂರು ಪಾದಚಾರಿಗಳಿಗೆ ನಡೆದಾಡುವುದೇ ಸಂಕಷ್ಟ !

mng--3 Aug Kuloor
Published on

ಮಂಗಳೂರು: ರಾಷ್ಟ್ರೀಯ ಹೆದ್ದಾರಿಯಲ್ಲಿ ಬೃಹತ್ ಹೊಂಡಗಳುಂಟಾದ ಕಾರಣ ಕಳೆದ 20 ದಿನಗಳಿಂದ ಕೂಳೂರು, ಬೈಕಂಪಾಡಿ ಹೆದ್ದಾರಿಯಲ್ಲಿ ಸಂಜೆಯ ವೇಳೆ ದಟ್ಟಣೆ ಉಂಟಾಗುತ್ತಿದೆ.

ಖಾಸಗಿ ಬಸ್‌ಗಳು ಹಾಗೂ ಇತರ ವಾಹನಗಳು ರಸ್ತೆ ಬಿಟ್ಟು ಯದ್ವಾ ತದ್ವಾ ನುಗ್ಗಿಸಿಕೊಂಡು ಬರುವುದರಿಂದ ರಸ್ತೆ ಬದಿ ನಡೆದಾಡುವ ಪಾದಚಾರಿಗಳಿಗೆ ಸಂಕಷ್ಟ ಎದುರಾಗಿದೆ. ವಾಹನಗಳು ಸಂಚರಿಸಿ ಕೆಸರುಮಯವಾಗುವುದರ ಜತೆಗೆ ತಾಗಿಸಿಕೊಂಡೇ ಹೋಗುತ್ತಿದ್ದಾರೆ. ಮಳೆಯಾಗುತ್ತಿದ್ದಾಗ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುವುದೇ ಸವಾಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net