

ಮಂಗಳೂರು: ಮಂಗಳೂರು ಪೊಲೀಸ್ ಕಮಿಷನರೆಟ್‌ನ ಕಾನೂನು ಮತ್ತು ಸುವ್ಯವಸ್ಥೆೆ ವಿಭಾಗದ ಡಿಸಿಪಿಯಾಗಿ ಸಿದ್ದಾರ್ಥ್ ಗೋಯಲ್ ಬುಧವಾರ ಅಧಿಕಾರ ಸ್ವೀಕರಿಸಿದರು.
2019ನೇ ಬ್ಯಾಚ್‌ನ ಐಪಿಎಸ್ ಅಧಿಕಾರಿಯಾಗಿರುವ ಇವರು ರಾಜಸ್ಥಾನದವರು. ತುಮಕೂರಿನ ತಿಪಟೂರು ಉಪವಿಭಾಗದ ಎಎಸ್‌ಪಿಯಾಗಿ ಸೇವೆ ಸಲ್ಲಿಸಿದ್ದಾರೆ. ಇಂಜಿನಿಯರ್ ಪದವೀಧರರಾಗಿರುವ ಇವರು ಅಹಮದಾಬಾದ್ ಐಐಎಂನಿಂದ ಎಂಬಿಎ ಪದವಿ ಕೂಡ ಗಳಿಸಿದ್ದಾರೆ. ಡಿಸಿಪಿಯಾಗಿದ್ದ ಅನ್ಶು ಕುಮಾರ್ ಶ್ರೀವಾಸ್ತವ ಅವರು, ಕರಾವಳಿ ಕಾವಲು ಪೊಲೀಸ್‌ನ ಎಸ್‌ಪಿಯಾಗಿ ನೇಮಕಗೊಂಡಿದ್ದಾರೆ.
ಅಧಿಕಾರ ಸ್ವೀಕರಿಸಿದ ಸಂದರ್ಭ ಮಾತನಾಡಿದ ಸಿದ್ದಾರ್ಥ್ ಅವರು, ಮಂಗಳೂರಿಗೆ ಹೊಸದಾಗಿ ಬಂದಿದ್ದೇನೆ. ಇಲ್ಲಿನ ಜನರು ಒಳ್ಳೆಯವರು, ವಿದ್ಯಾವಂತರು ಎಂಬುದನ್ನು ಕೇಳಿದ್ದೇನೆ. ಕಾನೂನು ಸುವ್ಯವಸ್ಥೆ ಕಾಯ್ದುಕೊಳ್ಳಲು ಜನರ ಸಹಕಾರ ನೀಡಬೇಕು. ಆಗ ಮಾತ್ರ ಅಧಿಕಾರಿಗಳಿಗೂ ಉತ್ತಮ ಸೇವೆ ಒದಗಿಸಲು ಸಾಧ್ಯ ಎಂದು ಹೇಳಿದರು.