

ಮಂಗಳೂರು: ನೆಲ್ಲಿತೀರ್ಥ ಶ್ರೀ ಸೋಮನಾಥೇಶ್ವರ ಗುಹಾಲಯದ ವಾರ್ಷಿಕ ತೀರ್ಥ ಸ್ನಾನ ಗುರುವಾರ ಆರಂಭಗೊಂಡಿತು. ಕ್ಷೇತ್ರದ ಎಡಪದವು ಸುಬ್ರಹ್ಮಣ್ಯ ತಂತ್ರಿ ಅವರ ನೇತೃತ್ವದಲ್ಲಿ ಚಿತ್ರಾಪುರ ಶ್ರೀ ವಿದ್ಯೇಂದ್ರ ತೀರ್ಥ ಸ್ವಾಮೀಜಿ ಅವರು ಭಕ್ತರೊಂದಿಗೆ ಗುಹಾಲಯ ಪ್ರವೇಶಿಸಿ ದೀಪ ಬೆಳಗಿಸಿದರು.
ಲಕ್ಷ್ಮೀ ನಾರಾಯಣ ಆಸ್ರಣ್ಣ ಕಟೀಲು, ಹರಿಕೃಷ್ಣ ಪುನರೂರು, ಪ್ರದೀಪ್ ಕುಮಾರ್ ಕಲ್ಕೂರ, ಭುವನಾಭಿರಮ ಉಡುಪ, ಅನಂತ ಕೃಷ್ಣ ಅಡಿಗ ಪುತ್ತಿಗೆ, ಎನ್.ವಿ.ವೆಂಕಟರಾಜ್ ಭಟ್ ನೆಲ್ಲಿತೀರ್ಥ, ಎನ್.ವಿ.ಜಿ.ಕೆ. ಭಟ್ ನೆಲ್ಲಿತೀರ್ಥ, ಎನ್.ವಿ. ರಮೇಶ್ ಭಟ್ ನೆಲ್ಲಿತೀರ್ಥ, ಪ್ರಸನ್ನ ಭಟ್ ನೆಲ್ಲಿತೀರ್ಥ, ವಸಂತ ಭಟ್ ನೆಲ್ಲಿತೀರ್ಥ, ಗಣಪತಿ ಭಟ್ ಅರ್ಚಕರು ನೆಲ್ಲಿತೀರ್ಥ, ಆನಂದ ಕಾವ ಸಾಂತ್ರಬೈಲ್, ಕೃಷ್ಣಪ್ಪ ಪೂಜಾರಿ ನೆಲ್ಲಿತೀರ್ಥ, ಸುಂದರ ಪೂಜಾರಿ ನೆಲ್ಲಿತೀರ್ಥ, ನರೇಶ್ ಶೆಣೈ ಮಂಗಳೂರು, ದೀಪ್ ಕಿರಣ್ ಸಾಲ್ಯಾನ್ ಕರಂಬಾರ್, ಹನುಮಂತ ಕಾಮತ್ ಮೊದಲಾದವರು ಉಪಸ್ಥಿತರಿದ್ದರು.
ಮಂಗಳೂರು ತಾಲೂಕಿನ ನೀರುಡೆಯ ಕೊಂಪದವಿನಲ್ಲಿರುವ ಈ ಗುಹಾಲಯ ಕರ್ನಾಟಕದಲ್ಲೇ ಅತೀ ದೊಡ್ಡ ಗುಹಾಲಯಗಳಲ್ಲಿ ಒಂದಾಗಿದೆ. ಮಂಗಳೂರು ನಗರದಿಂದ 30 ಕಿ.ಮೀ. ದೂರದಲ್ಲಿದ್ದು, ಪ್ರತಿ ವರ್ಷ ತುಲಾ ಸಂಕ್ರಮಣದಿಂದ ಮೇಷ ಸಂಕ್ರಮಣ(ಏಪ್ರಿಲ್14) ವರೆಗೆ ಗುಹಾಲಯ ಪ್ರವೇಶಿಸಿ ತೀರ್ಥ ಸ್ನಾನ ಮಾಡಲು ಭಕ್ತಾದಿಗಳಿಗೆ ಅವಕಾಶವಿರುತ್ತದೆ.
ದಿನಂಪ್ರತಿ ಬೆಳಗ್ಗೆ 7.30ರಿಂದ ಮಧ್ಯಾಹ್ನ 1 ಗಂಟೆ ವರೆಗೂ ಭಕ್ತರು ಗುಹೆ ಪ್ರವೇಶಿಸಬಹುದು ಪುರುಷರು ಪಂಚೆ, ಶಲ್ಯದೊಂದಿಗೆ ಹಾಗೂ ಮಹಿಳೆಯರು ಸೀರೆ ಅಥವಾ ಚೂಡಿದಾರ್ ಧರಿಸಿ ಬರಬಹುದು.