ಧ್ವನಿ ಬೆಳಕಿನ ಆಟವಿಲ್ಲದೆ ಯಾವ ನಾಟ್ಯವೂ ಇಲ್ಲ -- ಕಾರ್ಯಾಗಾರದಲ್ಲಿ ಡಾ.ಗಣೇಶ್ ಅಮೀನ್ ಸಂಕಮಾರ್ ಅಭಿಮತ

mng---21 Nov Natyaradana
Published on

ಮಂಗಳೂರು: ಮನುಷ್ಯ ದೇಹದೊಳಗೆ ಅಡಗಿರುವ ಧ್ವನಿ ಮತ್ತು ಬೆಳಕು ಅದು ದೇವ ಸೃಷ್ಟಿಯ ಜೀವ ಭಾವ. ಅಂತಹ ಜೀವ ಭಾವವೇ ಭರತನಾಟ್ಯದ ಒಳಗೆ ಅಡಗಿರುವ ಧ್ವನಿ ಮತ್ತು ಬೆಳಕು. ಧ್ವನಿ ಬೆಳಕಿನ ಆಟವಿಲ್ಲದೆ ಯಾವ ನಾಟ್ಯವೂ ಈ ಪ್ರಪಂಚದೊಳಗೆ ಇಲ್ಲ. ಅಂತಹ ಆಧ್ಯಾತ್ಮದ ಶಕ್ತಿಯೇ ನಾವು ಕಾಣುವ ಧ್ವನಿ ಮತ್ತು ಬೆಳಕು ಎಂದು ಜನಪದ ವಿದ್ವಾಂಸರಾದ ಡಾ. ಗಣೇಶ್ ಅಮೀನ್ ಸಂಕಮಾರ್ ಅಭಿಪ್ರಾಯಪಟ್ಟರು.

ಮಂಗಳೂರಿನ ನಾಟ್ಯಾರಾದನಾ ಕಲಾ ಕೇಂದ್ರದ 30ನೇ ವರ್ಷದ ಸಂಭ್ರಮ ತ್ರಿಂಶೋತ್ಸವದ ಸರಣಿ ಕಾರ್ಯಕ್ರಮ ನೃತ್ಯಾಮೃತ 12 ಭರತನಾಟ್ಯದೊಳಗಿನ ಧ್ವನಿ ಮತ್ತು ಬೆಳಕು ಎಂಬ ಕಾರ್ಯಾಗಾರದ ಉದ್ಘಾಟನಾ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾಲಯದ ರಂಗ ಅಧ್ಯಯನ ಕೇಂದ್ರದ ಸಹಯೋಗದೊಂದಿಗೆ ನಡೆದ ಕಾರ್ಯಾಗಾರವನ್ನು ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ನಿರ್ದೇಶಕಿ ಸುಭದ್ರ ರಾವ್ ಉದ್ಘಾಟಿಸಿದರು. ಕಳೆದ 30 ವರ್ಷಗಳಿಂದ ಸುಮಂಗಲ ರತ್ನಾಕರ್ ರಾವ್ ಇವರು ಭರತನಾಟ್ಯ ಕ್ಷೇತ್ರಕ್ಕೆ ಅನನ್ಯ ಕೊಡುಗೆಯನ್ನು ನೀಡಿದ್ದಾರೆ. ಅವರ ತ್ರಿಂಶೋತ್ಸವದ ಪ್ರತಿಯೊಂದು ಪ್ರಯೋಗಗಳು ಸಾಂಸ್ಕೃತಿಕ ಲೋಕಕ್ಕೆ ಮಹತ್ವದ ದಾಖಲೆಯಾಗುತ್ತದೆ ಎಂದರು.

ರಂಗ ನಿರ್ದೇಶಕ ನೀನಾಸಂ ತರಬೇತುಗಾರ ಬೆಳಕು ವಿನ್ಯಾಸದ ಕಲಾಗಾರ ಕ್ರಿಸ್ಟೋಫರ್ ಡಿಸೋಜ ನಿನಾಸಂ ಇವರು ಸಂಪನ್ಮೂಲ ವ್ಯಕ್ತಿಯಾಗಿದ್ದರು. ನೃತ್ಯ ಸೌರಭ ನಾಟ್ಯಲಯ ಉಳ್ಳಾಲ ಇಲ್ಲಿಯ ನಿರ್ದೇಶಕರಾದ ವಿದ್ವಾನ್ ಪ್ರಮೋದ್ ಕುಮಾರ್ ಉಳ್ಳಾಲ ಅತಿಥಿಯಾಗಿದ್ದರು.

ನಾಟ್ಯಾರಾದನ ಕಲಾಕೇಂದ್ರದ ಪ್ರಧಾನ ಟ್ರಸ್ಟಿ ವಿದುಷಿ ಸುಮಂಗಲಾ ರತ್ನಾಕರ ರಾವ್ ಸ್ವಾಗತಿಸಿದರು. ವಿದುಷಿ ಧರಿತ್ರಿ ಭಿಡೆ ಕಾರ್ಯಕ್ರಮ ನಿರ್ವಹಿಸಿದರು. ನಾಟ್ಯಾರಾಧನ ಕಲಾಕೇಂದ್ರದ ಟ್ರಸ್ಟಿ ರತ್ನಾಕರ ರಾವ್ ತ್ರಿಂಶೋತ್ಸವ ಸಮಿತಿಯ ಉಪಾಧ್ಯಕ್ಷ ಬೈಕಾಡಿ ಶ್ರೀನಿವಾಸರಾವ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net