ಅ.17-21 ಮಂಗಳೂರಿನಲ್ಲಿ ರಾಷ್ಟ್ರೀಯ ಓಪನ್ ರೇಟೆಡ್ ಚೆಸ್ ಪಂದ್ಯಾಟ

mng--12 Oct Chess
Published on

ಮಂಗಳೂರು: ರಾಷ್ಟ್ರೀಯ ಓಪನ್/ಕ್ಲಾಸಿಕಲ್ ರೇಟೆಡ್ ಚೆಸ್ ಪಂದ್ಯಾಟ ಅ. 17ರಿಂದ 21ರ ತನಕ ಮಂಗಳೂರಿನ ಕುದ್ಮುಲ್ ರಂಗರಾವ್ ಪುರಭವನದಲ್ಲಿ 9 ಸುತ್ತುಗಳಲ್ಲಿ ನಡೆಯಲಿದೆ.


ಸುಮಾರು 20 ವಷ ಗಳ ನಂತರ ನಿರಂತರ 5 ದಿನಗಳ ಚೆಸ್ ಪಂದ್ಯಾಟ ಇದಾಗಲಿದೆ. ಬೇರೆ ಬೇರೆ ರಾಜ್ಯಗಳ ಆಟಗಾರರು, ಅಂತಾರಾಷ್ಟ್ರೀಯ ಮಟ್ಟದ ಆಟಗಾರರ ಸಹಿತ ಸುಮಾರು 400 ಆಟಗಾರರು ಭಾಗವಹಿಸುವ ನಿರೀಕ್ಷೆಯಿದೆ ಎಂದು ಚೆಸ್ ಅಸೋಸಿಯೇಶನ್ ಜಿಲ್ಲಾ ಅಧ್ಯಕ್ಷ ರಮೇಶ್ ಕೋಟೆ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.


ಪಂದ್ಯಾವಳಿಯಲ್ಲಿ ಭಾಗವಹಿಸುವವರು ಡಿಡಿಡಿ.್ಚಛಿಠ್ಛಛಿಛಿ.್ಚಟಞ ಮೂಲಕ ಅ.14ರ ಒಳಗಾಗಿ ನೋಂದಣಿ ಮಾಡಿಕೊಳ್ಳಲು ಅವಕಾಶವಿದೆ. ಜಿಲ್ಲೆಯಲ್ಲಿ ಚೆಸ್ ವೇಗವಾಗಿ ಬೆಳೆಯುತ್ತಿರುವ ಕ್ರೀಡೆಯಾಗಿದ್ದು, ಹಲವಾರು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದ ಆಟಗಾರರನ್ನು ಜಿಲ್ಲೆ ಹೊಂದಿದೆ. ಚೆಸ್ ಆಟದ ಬೆಳವಣಿಗೆಯ ಪೂರಕವಾಗಿ ಪಂದ್ಯಾಟವನ್ನು ಹಮ್ಮಿಕೊಳ್ಳಲಾಗಿದೆ. 8 ಎಲೆಕ್ಟ್ರಾನಿಕ್ ಬೋರ್ಡ್‌ಗಳಲ್ಲಿ ಪಂದ್ಯಾವಳಿ ನಡೆಯಲಿದೆ ಎಂದರು.
ಮೇಯರ್ ಸುದೀರ್ ಶೆಟ್ಟಿ ಉದ್ಘಾಟಿಸಲಿದ್ದು, ಮುಖ್ಯ ಅತಿಥಿಗಳಾಗಿ ಶಾಸಕ ಡಿ.ವೇದವ್ಯಾಸ ಕಾಮತ್, ಪೊಲೀಸ್ ಆಯುಕ್ತ ಅನುಪಮ್ ಅಗ್ರವಾಲ್, ಕೆಎಸ್‌ಸಿಎ ಪ್ರಧಾನ ಕಾರ್ಯದರ್ಶಿ ಅರವಿಂದ ಶಾಸ್ತ್ರಿ, ಎಂಆರ್‌ಪಿಎಲ್ ಜನರಲ್ ಮ್ಯಾನೇಜರ್ ಕೃಷ್ಣ ್ಣಹೆಗ್ಡೆ ಮಿಯಾರ್, ಕರ್ನಾಟಕ ಬ್ಯಾಂಕ್‌ನ ಡಿಜಿಎಂ ಹೇರಳೆ ವಸಂತ ಆರ್. ಭಾಗವಹಿಸಲಿದ್ದಾರೆ. ಈ ಸಂದರ್ಭ ಜಿಲ್ಲೆಯ ಗ್ರಾಂಡ್ ಮಾಸ್ಟರ್ ಶರಣ್ ರಾವ್ ಅವರನ್ನು ಸನ್ಮಾನಿಸಲಾಗುವುದು ಎಂದವರು ತಿಳಿಸಿದರು.


ಅ.21ರಂದು ಸಮಾರೋಪ ಸಮಾರಂಭದಲ್ಲಿ ವಿಧಾನಸಭೆಯ ಸ್ಪೀಕರ್ ಯು.ಟಿ.ಖಾದರ್, ಕೆನರಾ ಬ್ಯಾಂಕ್‌ನ ಡಿಜಿಎಂ ಸುಧಾಕರ್ ಕೊಟ್ಟಾರಿ ಭಾಗವಹಿಲಿದ್ದಾರೆ. ಪಂದ್ಯಾಟವು ಆರು ಲಕ್ಷ ರೂ. ನಗದು, ವಿವಿಧ ವಿಬಾಗಗಳಲ್ಲಿ ಟ್ರೋಫಿ ಜೊತೆಗೆ ಸುಮಾರು 200 ಬಹುಮಾನಗಳನ್ನು ಹೊಂದಿದೆ ಎಂದು ಅವರು ವಿವರಿಸಿದರು.


ದ.ಕ. ಜಿಲ್ಲಾ ಚೆಸ್ ಅಸೋಸಿಯೇಶನ್‌ನ ಗೌರವಾಧ್ಯಕ್ಷ ಸುನೀಲ್ ಆಚಾರ್, ಉಪಾಧ್ಯಕ್ಷರಾದ ವಾಣಿ ಎಸ್. ಪಣಿಕ್ಕರ್, ಕೋಶಾಧಿಕಾರಿ ಪೂರ್ಣಿಮಾ ಎಸ್. ಆಳ್ವ, ಜತೆ ಕಾರ್ಯದರ್ಶಿ ಸತ್ಯ ಪ್ರಸಾದ್, ಸಹ ಕೋಶಾಧಿಕಾರಿ ರಮ್ಯಾ ಎಸ್. ರೈ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net