ನಂತೂರು ಹಿ.ಪ್ರಾ. ಶಾಲೆ ನೈರ್ಮಲ್ಯ ಯೋಜನೆ ಉದ್ಘಾಟನೆ

mng--20 sep nanthoor school
Published on

ಮಂಗಳೂರು: ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ (ಸಿಎಸ್‌ಆರ್) ನಿಧಿಯಡಿಯಲ್ಲಿ ನಗರದ ಅತ್ಯಂತ ಹಳೇ ಶಾಲೆಗಳಲ್ಲಿ ಒಂದಾದ ಬಜಾಲ್ -ನಂತೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನೈರ್ಮಲ್ಯ ಯೋಜನೆ ಉದ್ಘಾಟಿಸಲಾಯಿತು.


ಇಲ್ಲಿ ಹೆಚ್ಚಿನ ಮಹಿಳಾ ವಿದ್ಯಾರ್ಥಿ ದಾಖಲಾತಿಯನ್ನು ಹೊಂದಿದ್ದರೂ ಇಲ್ಲಿ ಹೆಣ್ಣುಮಕ್ಕಳಿಗೆ ಪ್ರತ್ಯೇಕ ಶೌಚಾಲಯಗಳಂತಹ ಮೂಲಭೂತ ಮೂಲಸೌಕರ್ಯಗಳನ್ನು ಶಾಲೆಯು ಹೊಂದಿಲ್ಲ.


ಈ ನೈರ್ಮಲ್ಯ ಯೋಜನೆಯು ವಿದ್ಯಾರ್ಥಿಗಳ ನೈರ್ಮಲ್ಯ ಪರಿಸ್ಥಿತಿಗಳನ್ನು ಗಣನೀಯವಾಗಿ ಸುಧಾರಿಸಲಿದೆ.
ಕಾರ್ಪೋರೇಟರ್ ಅಶ್ರಫ್ ಬಜಾಲ್ ಕಾರ್ಯಕ್ರಮ ಉದ್ಘಾಟಿಸಿ, ಸೂಯೆಜ್ ಕೊಡುಗೆಯನ್ನು ಶ್ಲಾಘಿಸಿದರು.


ಸೂಯೆಜ್ ಯೋಜನೆಗಳ ಯೋಜನಾ ವ್ಯವಸ್ಥಾಪಕ ರಮೇಶ ಪಾಟೀಲ, ಸಾರ್ವಜನಿಕ ಸಂಪರ್ಕ ಅಧಿಕಾರಿ ಡಾ.ರೇಷ್ಮಾ ಉಳ್ಳಾಲ್, ಸೇಫ್ಟಿ ಮ್ಯಾನೇಜರ್ ಸನೂಪ್ ವೀಟಿಲ್, ಕನ್‌ಸ್ಟ್ರಕ್ಷನ್ಸ್ ಮ್ಯಾನೇಜರ್ ಯುನುಷ್ ಮೊಹಮ್ಮದ್, ನೆಟ್‌ವರ್ಕ್ ಮ್ಯಾನೇಜರ್ ಉದಯ್ ಪ್ರಭು, ಶಾಲಾ ಮುಖ್ಯ ಶಿಕ್ಷಕಿ ಗ್ಲಾಡಿಸ್, ಶಾಲಾಭಿವೃದ್ಧಿ ಮತ್ತು ಮೇಲ್ವಿಚಾರಣಾ ಸಮಿತಿ ಅಧ್ಯಕ್ಷ ಮಹಮ್ಮದ್ ಇಶಾಕ್, ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ಮಹಮ್ಮದ್ ಇಕ್ಬಾಲ್, ಸದಸ್ಯರು ಮತ್ತು ಶಿಕ್ಷಕರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net