ಮಂಗಳೂರು ನಾಲ್ಕೂವರೆ ತಿಂಗಳ ಮಗುವಿನ ಕೊಲೆಗೈದು ತಾಯಿ ಆತ್ಮಹತ್ಯೆ

sucide
Published on

ಮಂಗಳೂರು: ನಾಲ್ಕೂವರೆ ತಿಂಗಳ ಗಂಡು ಮಗುವನ್ನು ಕೊಲೆಗೈದು, ತಾಯಿ ಕೂಡ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗುಜ್ಜರಕೆರೆ ಬಳಿಯ ಅಪಾರ್ಟ್‌ಮೆಂಟ್‌ನಲ್ಲಿ ಶನಿವಾರ ನಡೆದಿದೆ.


ಫಾತಿಮಾ ರುಕಿಯಾ (23) ತನ್ನ ನಾಲ್ಕೂವರೆ ತಿಂಗಳ ಮಗು ಅಬ್ದುಲ್ಲಾ ಹೂದ್‌ನನ್ನು ಮನೆಯಲ್ಲಿ ಯಾರೂ ಇಲ್ಲದ ವೇಳೆ ಬೆಡ್‌ರೂಮ್‌ನ ಗ್ಯಾಲರಿಯಲ್ಲಿ ಟಬ್‌ನಲ್ಲಿ ನೀರು ತುಂಬಿಸಿ ಮಗುವನ್ನು ನೀರಿನಲ್ಲಿ ಮುಳುಗಿಸಿ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾಳೆ. ಆ ಬಳಿಕ ಕಿಟಕಿಯ ಸರಳಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.


ಖತಿಜಾತುಲ್ ಕುಬ್ರ ಅವರ ಪುತ್ರಿ ಫಾತಿಮಾ ರುಕಿಯಾಳನ್ನು ಒಂದೂವರೆ ವರ್ಷದ ಹಿಂದೆ ಮುಹಮ್ಮದ್ ಉನೈಸ್ ಎಂಬವರಿಗೆ ವಿವಾಹ ಮಾಡಿಕೊಡಲಾಗಿತ್ತು. ಕಳೆದ ಜು.7ರಂದು ಹೆರಿಯಾಗಿತ್ತು. ಆ ಬಳಿಕ ಆಕೆ ಮಾನಸಿಕ ಖಿನ್ನತೆಗೆ ಒಳಗಾಗಿದ್ದಳು. ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿಕೊಂಡಿದ್ದರಿಂದ ಅರೋಗ್ಯ ಕ್ಲಿನಿಕ್‌ನಲ್ಲಿ ಮಾನಸಿಕ ವೈದ್ಯ ಡಾ. ಸುಪ್ರಿಯಾ ಅವರಲ್ಲಿ ಚಿಕಿತ್ಸೆ ಕೊಡಿಸುತ್ತಿದರು. ಆದರೆ ಶನಿವಾರ ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 1.30ರ ನಡುವೆ ಈ ಕೃತ್ಯ ಎಸಗಿದ್ದಾರೆ. ಈ ಬಗ್ಗೆ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net