ಮೂಡುಶೆಡ್ಡೆ ವೈದ್ಯಕೀಯ ತಪಾಸಣಾ ಶಿಬಿರ, ವೈದ್ಯರಿಗೆ ಸನ್ಮಾನ

mng--15 sep Health camp moodshedde
Published on

ಮಂಗಳೂರು: ಮೂಡುಶೆಡ್ಡೆಯ ಸತ್ಯನಾಥ ಸೇವಾ ಬಳಗ ಜಾರ ಇದರ ವತಿಯಿಂದ ಅತ್ತಾವರ ಕೆಎಂಸಿ ಆಸ್ಪತ್ರೆ, ಮಣಿಪಾಲ ಕಾಲೇಜ್ ಆಫ್ ಡೆಂಟಲ್ ಸೈನ್ಸ್ ಮತ್ತು ಇಂಡಿಯನ್ ಕ್ಯಾನ್ಸರ್ ಸೊಸೈಟಿಯ ಸಂಯುಕ್ತ ಸಹಯೋಗದಲ್ಲಿ ಬೃಹತ್ ಉಚಿತ ವೈದ್ಯಕೀಯ, ಕ್ಯಾನ್ಸರ್ ತಪಾಸಣೆ ಮತ್ತು ದಂತ ಚಿಕಿತ್ಸಾ ಶಿಬಿರ ಭಾನುವಾರ ಮೂಡುಶೆಡ್ಡೆ ಸಂಯುಕ್ತ ಪ್ರೌಢ ಶಾಲೆಯಲ್ಲಿ ನಡೆಯಿತು.


ಆದಿ ಕ್ಷೇತ್ರ ಜಾರ ಶ್ರೀ ಜಾರಂದಾಯ ದೈವಸ್ಥಾನದ ಗಡಿ ಪ್ರಧಾನ ಜತ್ತಿ ಪೂಜಾರಿ ಜಾರ ಅವರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಸಂಘ ಸಂಸ್ಥೆಗಳು ಸಮಾಜ ಮುಖಿ ಕೆಲಸಗಳನ್ನು ಮಾಡಿಕೊಂಡು ಹೋಗುವುದರಿಂದ ಊರಿನ ಜನರಿಗೆ ಪ್ರಯೋಜನವಾಗುತ್ತದೆ. ಸತ್ಯನಾಥ ಸೇವಾ ಬಳಗ ಸಂಘಟನೆಯು ಸಮಾಜಕ್ಕೆ ಅಗತ್ಯವಾಗಿ ಬೇಕಾಗುವ ಸೇವಾ ಚಟುವಟಿಕೆಗಳನ್ನು ಮಾಡಿಕೊಂಡು ಬರುತ್ತಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಸಮಾಜ ಮುಖಿ ಕೆಲಸಗಳು ನಡೆಯಲಿ ಎಂದು ಹಾರೈಸಿದರು.


ಸತ್ಯನಾಥ ಸೇವಾ ಬಳಗದ ಅಧ್ಯಕ್ಷ ಸುದರ್ಶನ್ ಕೋಟ್ಯಾನ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಬೋಂದೆಲ್ ನ ವೈದ್ಯ ಡಾ. ಸತೀಶ್ ಕಲ್ಲಿಮಾರ್ ಭಾಗವಹಿಸಿದ್ದು, ಅವರನ್ನು ಸತ್ಯನಾಥ ಸೇವಾ ಬಳಗದ ವತಿಯಿಂದ ಸನ್ಮಾನಿಸಲಾಯಿತು. ಬಳಿಕ ಮಾತನಾಡಿದ ಅವರು ಪ್ರತಿಯೊಂದು ವೃತ್ತಿಯೂ ಸೇವೆ ಒದಗಿಸಲು ಉತ್ತಮ ಅವಕಾಶ. ಆರೋಗ್ಯ ಸೇವೆಯು ಜನರಿಗೆ ಕೊಡುವ ಅತ್ಯುತ್ತಮ ಸೇವೆ ಎಂದು ಹೇಳಿದರು.


ಧಾರ್ಮಿಕ ಪರಿಷತ್ತಿನ ಮಾಜಿ ಸದಸ್ಯ ಪದ್ಮನಾಭ ಕೋಟ್ಯಾನ್, ಪರಾರಿ ಮುತ್ತು ಲಕ್ಷ್ಮಿಯ ಲಕ್ಷ್ಮಣ್ ಕೊಟ್ಟಾರಿ, ಅದಿತಿ ಫುಡ್ ಪ್ರಾಡಕ್ಟ್ ಸಂಸ್ಥೆಯ ಉಮೇಶ್ ವಿ.ಕೆ., ಮೂಡುಶೆಡ್ಡೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಅನಿಲ್ ಕುಮಾರ್, ಉಪಾಧ್ಯಕ್ಷೆ ಬಬಿತಾ ದಯಾನಂದ್, ವೈದ್ಯರಾದ ಡಾ.ಅವಿನಾಶ್, ಡಾ.ಸೌರ್ಜಿಯಾ ಬ್ಯಾನರ್ಜಿ ಮೊದಲಾದವರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net