ದೈಹಿಕ, ಮಾನಸಿಕ ಕ್ಷಮತೆಗೆ ಕ್ರೀಡೆ ಪೂರಕ ಬ್ಯಾಡ್ಮಿಂಟನ್ ಸೀಜನ್-3 ಪಂದ್ಯಾಟ ಉದ್ಘಾಟಿಸಿ ಮೆಸ್ಕಾಂ ಎಂಡಿ ಡಿ.ಪದ್ಮಾವತಿ ಹೇಳಿಕೆ

mng--27 Oct Mescom sports
Published on

ಮಂಗಳೂರು: ಕ್ರೀಡೆಯಿಂದ ದೈಹಿಕ, ಮಾನಸಿಕ ಕ್ಷಮತೆ ವೃದ್ದಿಯಾಗುತ್ತದೆ. ಅದುದರಿಂದ ಪ್ರತಿಯೋರ್ವರು ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದು ಅಗತ್ಯ ಎಂದು ಮೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರಾದ ಡಿ.ಪದ್ಮಾವತಿ ಹೇಳಿದರು.

ಮಂಗಳೂರು ವಿದ್ಯುತ್ ಸರಬರಾಜು ಕಂಪೆನಿ ನಿಯಮಿತ (ಮೆಸ್ಕಾಂ) ಮಂಗಳೂರು ವಲಯದ ಬ್ಯಾಡ್ಮಿಂಟನ್ ಸೀಜನ್-3 ಪಂದ್ಯಾಟವನ್ನು ಅವರು ನಗರದ ಪರ್ಫೆಟ್ ಪಾಸ್ ಕ್ರೀಡಾಂಗಣದಲ್ಲಿ ಶನಿವಾರ ಉದ್ಘಾಟಿಸಿ ಮಾತನಾಡಿದರು.

ಮೆಸ್ಕಾಂ ಕ್ರೀಡಾ ಚಟುವಟಿಕೆಗಳಿಗೆ ನಿರಂತರ ಪ್ರೋತ್ಸಾಹ ನೀಡುತ್ತಾ ಬಂದಿದೆ. ಇಂದು ಬ್ಯಾಡ್ಮಿಂಟನ್ ಪಂದ್ಯಾಟ ಉತ್ತಮ ರೀತಿಯಲ್ಲಿ ಆಯೋಜನೆಗೊಂಡಿದೆ. ಇದೇ ರೀತಿ ಇನ್ನೂ ಹೆಚ್ಚಿನ ಕ್ರೀಡಾಕೂಟಗಳು ಆಯೋಜನೆಗೊಳ್ಳಲಿ ಎಂದರು.

ತಾಂತ್ರಿಕ ನಿರ್ದೇಶಕರಾದ ಕೆ.ಎಂ. ಮಹಾದೇವ ಸ್ವಾಮಿ ಪ್ರಸಾದ ಅವರು ಕ್ರೀಡಾಪಟುಗಳಿಗೆ ಶುಭ ಹಾರೈಸಿ, ಸಾಧಿಸುವ ಛಲ, ಪರಿಶ್ರಮ ಮತ್ತು ಸಮರ್ಪಣಾ ಮನೋಭಾವದಿಂದ ತೊಡಗಿಸಿಕೊಂಡಾಗ ಕ್ರೀಡೆಯಲ್ಲಿ ಯಶಸ್ಸು ಸಾಧ್ಯ. ಸೋಲು, ಗೆಲುವು ಇದ್ದದ್ದೆ. ಸೋಲು ಬಂದಾಗ ಕುಗ್ಗದೆ ಅದನ್ನೇ ಗೆಲುವಿಗೆ ಸೋಪಾನವಾಗಿಸಿಕೊಂಡು ಮುನ್ನಡೆಯಬೇಕು ಎಂದರು.

ಮುಖ್ಯ ಆರ್ಥಿಕ ಅಧಿಕಾರಿ ಮೌರೀಸ್ ಡಿಸೋಜ, ಆರ್ಥಿಕ ಸಲಹೆಗಾರರಾದ ಬಿ.ಹರಿಶ್ಚಂದ್ರ, ಮಂಗಳೂರು ವಲಯ ಮುಖ್ಯ ಎಂಜಿನಿಯರ್ ರವಿಕಾಂತ ಕಾಮತ್, ಪ್ರಧಾನ ವ್ಯವಸ್ಥಾಪಕರಾದ ಉಮೇಶ್, ತಂಡಗಳ ವ್ಯವಸ್ಥಾಪಕರು, ಸೂಪರಿಂಟೆಂಡೆಂಟ್ ಎಂಜಿನಿಯರ್ ಗಳಾದ ಹರೀಶ್ ಕುಮಾರ್, ರಮೇಶ್ ಉಪಸ್ಥಿತರಿದ್ದರು.

ಪಂದ್ಯಾಟ ಆಯೋಜನಾ ಸಮಿತಿಯ ಪ್ರಭಾತ್ ಜೋಶಿ ಅವರು ಪಂದ್ಯಾಟದ ಸ್ವರೂಪದ ಕುರಿತು ಮಾಹಿತಿ ನೀಡಿದರು. ದೀಪಕ್ ನಿಯಮಗಳ ಬಗ್ಗೆ ವಿವರಿಸಿದರು. ಸೀಮಾ ಎಂ.ಆರ್. ಸ್ವಾಗತಿಸಿ, ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net