ಮೆಸ್ಕಾಂ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ

mng--mescom
Published on

ಮಂಗಳೂರು: ಮಂಗಳೂರು ವಿದ್ಯುಚ್ಛಕ್ತಿ ಸರಬರಾಜು ಕಂಪೆನಿ ನಿಯಮಿತ ( ಮೆಸ್ಕಾಂ) ವತಿಯಿಂದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಶನಿವಾರ ನಗರದ ಕಾವೂರು ಕವಿಪ್ರನಿನಿ ನೌಕರರ ಸಭಾಭವನದಲ್ಲಿ ಜರುಗಿತು.

ಮೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಜಯಕುಮಾರ್ ಆರ್. ಹಾಗೂ ಸುಹಾಸಿನಿ ಜಯಕುಮಾರ್ ಉದ್ಘಾಟಿಸಿದರು.

ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಜಯಕುಮಾರ್ ಆರ್. ಅವರು, ಒಬ್ಬ ವ್ಯಕ್ತಿಯ ಜೀವನದಲ್ಲಿ ಮಹಿಳೆಯ ಪಾತ್ರ ತುಂಬಾ ದೊಡ್ಡದಿರುತ್ತದೆ. ತಾಯಿಯಾಗಿ, ಸೋದರಿಯಾಗಿ, ಪತ್ನಿಯಾಗಿ ಬಾಳಿಗೆ ಬೆಳಕಾಗುತ್ತಾಳೆ. ಕುಟುಂಬದ ಏಳಿಗೆಗೆಗಾಗಿ ಆಕೆ ವಹಿಸುವ ಶ್ರಮ, ಮಾಡುವ ತ್ಯಾಗ ಅಪಾರ. ಅದ್ದರಿಂದಲೇ ನಮ್ಮ ದೇಶದಲ್ಲಿ ಮಹಿಳೆಯನ್ನು ಭೂಮಿ ತಾಯಿಗೆ ಹೋಲಿಸಿದ್ದಾರೆ. ಮಾತೃ ದೇವೋಭವ ಎಂದು ಪರಿಗಣಿಸಿದ್ದಾರೆ. ಸಮಾಜದ ಕಟ್ಟುಪಾಡುಗಳ ಹೊರತಾಗಿಯೂ ಕೂಡ ಈಗಿನ ಆಧುನಿಕ ದಿನಗಳಲ್ಲಿ ಆಕೆ ಸಾಧನೆಯ ಶಿಖರವನ್ನು ಮುಟ್ಟುತ್ತಿದ್ದಾಳೆ ಎಂದರು.

ತಾಂತ್ರಿಕ ನಿರ್ದೇಶಕ ಕೆ.ಎಂ. ಮಹಾದೇವ ಸ್ವಾಮಿ ಪ್ರಸನ್ನ ಅವರು ಮಾತನಾಡಿ, ಕುಟುಂಬ, ಸಮಾಜ, ರಾಷ್ಟ್ರ ನಿರ್ಮಾಣದಲ್ಲಿ ಮಹಿಳೆಯ ಕೊಡುಗೆ, ಆಕೆ ವಹಿಸುವ ಪಾತ್ರ ಮಹತ್ತರವಾದುದು ಎಂದರು. ಮಹಿಳೆ ಎಷ್ಟೆ ಒತ್ತಡಗಳಿದ್ದರೂ ಅದನ್ನು ಸಮರ್ಥವಾಗಿ ನಿರ್ವಹಿಸಿ ಕೌಟುಂಬಿಕವಾಗಿ, ಔದ್ಯೋಗಿಕವಾಗಿ ತನ್ನ ಕೆಲಸ ಕಾರ್ಯಗಳನ್ನು ಅಚ್ಚುಕಟ್ಟಾಗಿ ನಿಭಾಯಿಸುತ್ತಾಳೆ. ನಮ್ಮ ಸಂಸ್ಕೃತಿಯಲ್ಲಿ ಮಹಿಳೆಯನ್ನು ದೇವತಾ ಸ್ಪರೂಪಿಣಿಯಾಗಿ ಕಾಣಲಾಗುತ್ತದೆ ಎಂದರು.

ಮುಖ್ಯ ಅರ್ಥಿಕ ಅಧಿಕಾರಿ ಬಿ. ಹರಿಶ್ಚಂದ್ರ, ಅರ್ಥಿಕ ಸಲಹೆಗಾರ ಮುರಳೀಧರ ನಾಯಕ್ , ಪ್ರಧಾನ ವ್ಯವಸ್ಥಾಪಕ ಹರೀಶ್ ಕುಮಾರ್, ಕಂಪೆನಿ ಕಾರ್ಯದರ್ಶಿ ಪ್ರಭಾತ್ ಜೋಶಿ, ವಿಪ್ರನಿನಿ ನೌಕರರ ಸಂಘದ ಪದಾಧಿಕಾರಿಗಳಾದ ಗುರುಮೂರ್ತಿ, ಶ್ರೀನಿವಾಸಪ್ಪ, ತೇಜಸ್ಪಿ, ನವೀನ್ ಕುಮಾರ್, ಮಹಿಳಾ ದಿನಾಚರಣೆ ಸಮಿತಿಯ ವಿನುತಾ, ಭಾರತಿ, ಮೆಸ್ಕಾಂ ಜಾಗೃತ ದಳದ ಡಿವೈಎಸ್ಪಿ ಟಿ.ಆರ್.ಜಯಶಂಕರ್ ಉಪಸ್ಥಿತರಿದ್ದರು .

ಮಹಿಳಾ ದಿನಾಚರಣೆ ಸಮಿತಿಯ ಸೀಮಾ ಸ್ವಾಗತಿಸಿದರು. ಬೀನಾ ನಿರೂಪಿಸಿದರು. ನಯನಾ ವಂದಿಸಿದರು.

ಮಹಿಳಾ ದಿನಾಚರಣೆ ಅಂಗವಾಗಿ ಮಹಿಳೆಯರಿಗಾಗಿ ವಿವಿಧ ಮನೋರಂಜನಾ ಸ್ಫರ್ಧೆಗಳು, ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net