

ಮಂಗಳೂರು: ಮೇರಿಹಿಲ್ನ ಮೌಂಟ್ ಕಾರ್ಮೆಲ್ ಸೆಂಟ್ರಲ್ ಶಾಲೆಯ ರಕ್ಷಕ ಶಿಕ್ಷಕ ಸಂಘದ ವತಿಯಿಂದ ‘ಎಂಸಿಸಿಎಸ್ ೆಸ್ಟೆಂಬರ್ 2ಕೆ24’ ಉತ್ಸವ ನ.9 ಮತ್ತು 10 ರಂದು ಶಾಲಾ ಮೈದಾನದಲ್ಲಿ ಆಯೋಜಿಸಲಾಗಿದೆ.
ನ.9 ರಂದು ಮಧ್ಯಾಹ್ನ 3 ಗಂಟೆಯಿಂದ ರಾತ್ರಿ 8.30ರವರೆಗೆ ಮತ್ತು ನ.10 ರಂದು ಬೆಳಗ್ಗೆ 11 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ಉತ್ಸವವನ್ನು ಆಯೋಜಿಸಲಾಗಿದೆ ಎಂದು ಶಾಲೆಯ ಪ್ರಾಂಶುಪಾಲೆ ಸಿ. ಮೆಲಿಸ್ಸಾ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಪೋಷಕರಿಗೆ ಮತ್ತು ಸಾರ್ವಜನಿಕರಿಗೆ ಆಹಾರ ಉತ್ಸವ, ಲಕ್ಕಿ ಗೇಮ್ಗಳು, ಸ್ಪರ್ಧೆಗಳು, ನೃತ್ಯ, ಡಿಜೆ, ಸಂಗೀತ ಮತ್ತು ಪ್ರಸಿದ್ಧ ಕಲಾವಿದರಿಂದ ವಿವಿಧ ಮನೋರಂಜನೆಗಳು ನಡೆಯಲಿದೆ. ಶಾಲೆಗೆ ಹೊಸ ಆಟದ ಮೈದಾನದ ಸಹಾಯಾರ್ಥವಾಗಿ ಈ ಉತ್ಸವ ಆಯೋಜಿಸಿದ್ದೇವೆ ಎಂದು ತಿಳಿಸಿದರು.
ಎರಡು ದಿನಗಳ ಉತ್ಸವದಲ್ಲಿ ಸುಮಾರು 10 ರಿಂದ 15 ಸಾವಿರ ಮಂದಿ ಭಾಗವಹಿಸುವ ನಿರೀಕ್ಷೆ ಇದೆ. ಸುಮಾರು 50 ಆಹಾರ ಮಳಿಗೆಗಳು, ಮಕ್ಕಳಿಗೆ ಪ್ರತ್ಯೇಕ ಗೇಮ್ಸ್, ವಾಹನಗಳ ಪ್ರದರ್ಶನವೂ ಇರಲಿದೆ. ನ.9 ರಂದು ಅಂತರ್ ಕಾಲೇಜು ನೃತ್ಯ ಪ್ರದರ್ಶನ, ನ.10 ರಂದು ಪ್ಯಾಮಿಲಿ ಟ್ಯಾಲೆಂಟ್ ರೌಂಡ್, ವಿವಿಧ ವಯೋಮಾನದ ಪುರುಷ ಮತ್ತು ಮಹಿಳೆಯರಿಗೆ ಪ್ರತ್ಯೇಕ ವಿಭಾಗಗಳಲ್ಲಿ ುಟ್ಬಾಲ್ ಪಂದ್ಯಾಟ ಜರುಗಲಿದೆ ಎಂದು ವಿವರಿಸಿದರು.
ರಕ್ಷಕ ಶಿಕ್ಷಕ ಸಂಘದ ಉಪಾಧ್ಯಕ್ಷೆ ಪ್ರೀಮ ಮರಿಯ ಡಿಕೋಸ್ಟ, ಸಂಘಟಕರಾದ ಶಾಶ್ವತಿ, ಸುಜಯ್ ಡಿಸಿಲ್ವ ಇದ್ದರು.