ಮೇರಿಹಿಲ್ ಜಾಗರ್ಸ್ ಪಾರ್ಕ್‌ನಲ್ಲಿ ಸಂಭ್ರಮದ ಸ್ವಾತಂತ್ರ ದಿನಾಚರಣೆ

mng--15 Aug jogars park
Published on

ಮಂಗಳೂರು: ಮೇರಿಹಿಲ್‌ನ ಜಾಗರ್ಸ್ ಪಾರ್ಕ್ ವತಿಯಿಂದ ಹೆಲಿಪ್ಯಾಡ್‌ನಲ್ಲಿ 78ನೇ ಸ್ವಾತಂತ್ರೊೃೀತ್ಸವ ಆಚರಿಸಲಾಯಿತು.


ಪತ್ರಕರ್ತ ಹರೀಶ್ ಮೋಟುಕಾನ ರಾಷ್ಟ್ರ ಧ್ವಜಾರೋಹಣಗೈದರು. ಸ್ವಾತಂತ್ರೃ ಹೋರಾಟದಲ್ಲಿ ಕರಾವಳಿಯ ಕೊಡುಗೆ ಅನನ್ಯ.
ಸ್ವಾತಂತ್ಯ್ಯ ಕ್ಕಾಗಿ ತ್ಯಾಗ, ಬಲಿದಾನಗೈದ ಹೋರಾಟಗಾರರನ್ನು ಸ್ಮರಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ. ಮಕ್ಕಳಲ್ಲಿ ದೇಶಪ್ರೇಮ, ಉತ್ತಮ ಸಂಸ್ಕಾರ, ಪರಧರ್ಮ ಸಹಿಷ್ಣುತೆ ಮೂಡಿಸುವಲ್ಲಿ ಪ್ರತಿಯೊಬ್ಬ ಹೆತ್ತವರ ಹೊಣೆಗಾರಿಕೆಯಾಗಿದೆ ಎಂದರು.


ಈ ಸಂದರ್ಭದಲ್ಲಿ ವಾಣಿಜ್ಯ ತೆರಿಗೆ ಇಲಾಖೆಯ ನಿವೃತ್ತ ಜಂಟಿ ಆಯುಕ್ತ ನಾಗೇಶ್ ರಾವ್ ಕಲ್ಯಾಣಪುರ ಮಾತನಾಡಿ, ಹಿರಿಯ ಹೋರಾಟದಿಂದ ಪಡೆದ ಸ್ವಾತಂತ್ರೃವನ್ನು ದುರುಪಯೋಗ ಮಾಡದೆ, ದೇಶದ ಅಭಿವೃದ್ಧಿಗೆ ಚಿಂತನೆ ನಡೆಸಬೇಕಾಗಿದೆ. ಪರಸ್ಪರ ಸಹೋದರತೆಯಿಂದ ಜೀವನ ನಮ್ಮದಾಗಬೇಕು ಎಂದರು.


ಹಿರಿಯರಾದ ಗೋಪಾಲ ಕಾಮತ್ ಸಂದರ್ಭೋಚಿತವಾಗಿ ಮಾತನಾಡಿದರು.


ಸಂಘಟಕರಾದ ಉಮೇಶ್ ಠಾಕ್ರೆ, ಜೀವನ್, ವಿದ್ಯಾಧರ್, ಮಂಜು ಹಾಸನ್ ಮೊದಲಾದವರಿದ್ದರು. ಮಹೇಶ್ ಶೆಟ್ಟಿ ಸ್ವಾಗತಿಸಿದರು. ನಾರಾಯಣ ವಂದಿಸಿದರು. ಎಂಆರ್‌ಪಿಎಲ್‌ನ ಅಧಿಕಾರಿ ಶಶಿಕಾಂತ ಖೋತ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net