ದಕ್ಷಿಣ ಕನ್ನಡ ಜಿಲ್ಲಾ ಮರಾಟಿ ಸಮಾಜ ಸೇವಾ ಸಂಘದ ವಾರ್ಷಿಕ ಮಹಾಸಭೆ

mng---26 Sep Marati samaja
Published on

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಮರಾಟಿ ಸಮಾಜ ಸೇವಾ ಸಂಘ ಮಂಗಳೂರು ಇದರ ವಾರ್ಷಿಕ ಮಹಾಸಭೆ ಹಾಗೂ ಸತ್ಯನಾರಾಯಣ ಪೂಜೆಯು ಇತ್ತೀಚೆಗೆ ರವಿಪ್ರಸಾದ್ ನಾಯ್ಕ ಕಯ್ಯರ್‌ರವರ ಅಧ್ಯಕ್ಷತೆಯಲ್ಲಿ ಬಾಳಂಭಟ್ ಸಭಾ ಭವನದಲ್ಲಿ ಜರಗಿತು.


ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿಯಲ್ಲಿ ಶೇ.80 ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಪಿಎಚ್‌ಡಿ ಪಡೆದ ಡಾ.ಪ್ರವೀಣ್, ಡಾ.ಭಾಸ್ಕರ್ ಹಾಗೂ ಡಾ.ಬಾಗ್ಯಲಕ್ಷ್ಮೀ ಅವರನ್ನು ಸನ್ಮಾನಿಸಲಾಯಿತು.


ಡಾ.ದಿನೇಶ್ ನಾಯ್ಕ ರವರ ನೇತೃತ್ವದಲ್ಲಿ ವೆಬ್‌ಸೈಟನ್ನು ಲೋಕಾರ್ಪಣೆಗೊಳಿಸಲಾಯಿತು. ಶಾರದಾ ಪದವಿಪೂರ್ವ ಕಾಲೇಜು ಪ್ರಾಂಶುಪಾಲ ಪ್ರಕಾಶ್ ನಾಯ್ಕ, ಬೆಂಗಳೂರು ಭಾರತ್ ಇಲೆಕ್ಟ್ರಾನಿಕ್ಸ್‌ನ ಜಂಟಿ ಮಹಾ ಪ್ರಬಂಧಕ ನರಸಿಂಹ ನಾಯ್ಕ, ಇಂಟೆಲ್ ಕಾರ್ಪೊರೇಷನ್‌ದಿನೇಶ್ ನಾಯ್ಕ ಚಾರ್ಮಾಡಿ ಮುಖ್ಯ ಅತಿಥಿಗಳಾಗಿದ್ದರು.


ಸಂಘದ ಗೌರವ ಸಲಹೆಗಾರ ರಾಮ ನಾಯ್ಕ ನಟ್ಟಿ ಪ್ರಸ್ತಾವನೆಗೈದರು. ಮಹಾಲಿಂಗ ನಾಯ್ಕ ಗುರುಪುರ ಇವರು 2023-24ರ ವರದಿ ಮಂಡಿಸಿದರು ಹಾಗೂ ಖಜಾಂಜಿ ಜಯ ಶಂಕರ್ ನಾಯ್ಕ ಲೆಕ್ಕ ಪತ್ರ ಮಂಡಿಸಿ ಸಭೆಯ ಅನುಮೋದನೆ ಪಡೆದರು.


ನೂತನ ಪದಾಧಿಕಾರಿಗಳ ಆಯ್ಕೆ:
2024-25 ರ ಸಾಲಿನ ಕಾರ‌್ಯಕಾರಿ ಸಮಿತಿಗೆ ಮಹಾಲಿಂಗ ನಾಯ್ಕ ಹೆಚ್ ಅವರು ಸದಸ್ಯರನ್ನು ಆಯ್ಕೆ ಮಾಡಿದರು. ಅಧ್ಯಕ್ಷ ವಿಶ್ವನಾಥ ನಾಯ್ಕ ಕೋಮಾಲಿ, ಪ್ರ.ಕಾರ್ಯದರ್ಶಿ ಮಹಾಲಿಂಗ ನಾಯ್ಕ ಎಚ್., ಕೋಶಾಧಿಕಾರಿ ಜಯಶಂಕರ್ ನಾಯ್ಕ, ಕಟ್ಟಡ ನಿರ್ಮಾಣ ಸಮಿತಿಗೆ ಶ್ರೀನಿವಾಸ್ ನಾಯ್ಕ ಪಡೀಲ್ ಅವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು.


ಪ್ರೇಮ ಮಾಧವ ನಾಯ್ಕ ರವರು ಪ್ರಾರ್ಥಿಸಿದರು. ಸೂರ‌್ಯಕಾಂತ್ ನಾಯ್ಕ ಸ್ವಾಗತಿಸಿದರು. ವಿ.ಪಿ ನಾಯ್ಕ ವಂದಿಸಿದರು. ವನಿತಾ ಸುಂದರ್ ಕಾರ್ಯಕ್ರಮ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net