ಹಬ್ಬದ ವಾತಾವರಣ ಉಂಟು ಮಾಡಿದ ರನ್ನರ್ಸ್ ಕ್ಲಬ್ ಮ್ಯಾರಥಾನ್

mng--5 Nov marathon
Published on

ಮಂಗಳೂರು: ಅಬಾಲ ವೃದ್ಧರು, ವಿಕಲಚೇತನರು ಸೇರಿದಂತೆ ನಾಲ್ಕು ಸಾವಿರಕ್ಕೂ ಅಧಿಕ ಓಟಗಾರರು, ಜಪಾನ್ ಮತ್ತು ಡೆನ್ಮಾರ್ಕ್‌ನ ಅಂತಾರಾಷ್ಟ್ರೀಯ ಓಟಗಾರರ ಮುಖ್ಯ ಆಕರ್ಷಣೆ, ಹಬ್ಬದ ವಾತಾವರಣಕ್ಕೆ ಸಾಕ್ಷಿಯಾಗಿದ್ದು ಭಾನುವಾರ ಬೆಳಗ್ಗೆ ಮಂಗಳೂರು ರನ್ನರ್ಸ್ ಕ್ಲಬ್ ಆಯೋಜಿಸಿದ್ದ ನೀವಯಸ್ ಮಂಗಳೂರು ಮ್ಯಾರಥಾನ್- 2023 ಕಾರ್ಯಕ್ರಮದಲ್ಲಿ.


ನಗರದ ಮಂಗಳಾ ಕ್ರೀಡಾಂಗಣದಲ್ಲಿ ನಡೆದ ಸಮಾರೋಪ ಕಾರ್ಯಕ್ರಮದಲ್ಲಿ ವಿಧಾನಸಭೆ ಸ್ಪೀಕರ್ ಯು.ಟಿ.ಖಾದರ್ ಬಹುಮಾನ ವಿತರಿಸಿ ಮಾತನಾಡಿದರು. ಹಿರಿಯ- ಕಿರಿಯರೆನ್ನದೆ ಎಲ್ಲರನ್ನೂ ಒಗ್ಗೂಡಿಸಿ, ಮುನ್ನಡೆಸುವ ಮ್ಯಾರಥಾನ್, ವಾಕಥಾನ್‌ಗಳು ಹಬ್ಬದ ವಾತಾವರಣ, ಆರೋಗ್ಯದ ಪ್ರಜ್ಞೆ ಮೂಡಿಸುತ್ತಿವೆ. ಇದು ನಗರಕ್ಕೆ ಮಾತ್ರ ಸೀಮಿತವಾಗಿರದೆ, ತಾಲೂಕು ಮಟ್ಟದಲ್ಲೂ ನಡೆಯಬೇಕು ಎಂದರು.


ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ನೀವಿಯಸ್ ಸೊಲ್ಯೂಷನ್ ಪ್ರೈ.ಲಿ.ನ ಸಿಇಒ ಸುಯೋಗ್ ಶೆಟ್ಟಿ, ರೇಸ್ ಡೈರೆಕ್ಟರ್ ಅಭಿಲಾಷ್ ಡೊಮಿನಿಕ್, ಮಂಗಳೂರು ರನ್ನರ್ಸ್ ಕ್ಲಬ್ ಅಧ್ಯಕ್ಷೆ ಅಮಿತಾ ಡಿಸೋಜ ಉಪಸ್ಥಿತರಿದ್ದರು.


42.2 ಕಿ.ಮೀ. ದೂರದ ಪೂರ್ಣ ಮ್ಯಾರಥಾನ್‌ನಲ್ಲಿ 100ಕ್ಕೂ ಹೆಚ್ಚು ಓಟಗಾರರು, 21.1 ಕಿ.ಮೀ. ದೂರದ ಹ್ಾ ಮ್ಯಾರಥಾನ್‌ನಲ್ಲಿ 600ಕ್ಕೂ ಹೆಚ್ಚು ಮಂದಿ, 10 ಕಿಮೀ ನಲ್ಲಿ 1000ಕ್ಕೂ ಹೆಚ್ಚು, 5 ಕಿಮೀನಲ್ಲಿ 1,350ಕ್ಕೂ ಹೆಚ್ಚು ಮತ್ತು 2ಕಿಮೀ ಗಮ್ಮತ್ ಓಟದಲ್ಲಿ 900ಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದರು. ಕಾರ್ಯಕ್ರಮದ ಚಾರಿಟಿ ಪಾಲುದಾರರಾದ ರೋಮನ್ ಮತ್ತು ಕ್ಯಾಥರೀನ್ ಲೋಬೊ ದೃಷ್ಟಿ ವಿಕಲಚೇತನರ ಶಾಲೆಯ ಮಕ್ಕಳು ಕೂಡಾ ಓಟದಲ್ಲಿ ಭಾಗವಹಿಸಿದ್ದರು.


ಕರ್ನಾಟಕ ರಾಜ್ಯ ಮೀಸಲು ಪೊಲೀಸ್‌ನ ಐಜಿಪಿ ಸಂದೀಪ್ ಪಾಟೀಲ್ ಮ್ಯಾರಥಾನ್ ಉದ್ಘಾಟಿಸಿ, ಹ್ಾ ಮ್ಯಾರಥಾನ್‌ನಲ್ಲಿ ಭಾಗವಹಿಸಿದರು. ಏಷ್ಯನ್ ಗೇಮ್ಸ್ ಚಿನ್ನದ ಪದಕ ವಿಜೇತ ಮಿಜೋ ಚಾಕೋ ಕುರಿಯನ್, ಡಿಸಿಪಿ ದಿನೇಶ್ ಕುಮಾರ್, ನಿವೀಯಸ್ ಸೊಲ್ಯೂಷನ್‌ನ ಚ್ೀ ಗ್ರೋಥ್ ಆಫಿಸರ್ ಶಶಿರ್ ಶೆಟ್ಟಿ, ಸಿಎ್ಎಎಲ್‌ನ ವ್ಯವಸ್ಥಾಪಕ ನಿರ್ದೇಶಕ ವಿಜಯ್ ಮೊರಾಸ್, ಮಂಗಳೂರು ಇನ್ಫೋಸಿಸ್ ಮುುಖ್ಯಸ್ಥ ವಾಸುದೇವ್ ಕಾಮತ್, ಸಂಘಟಕ ಯತೀಶ್ ಬೈಕಂಪಾಡಿ, ಇನ್ಫೋಸಿಸ್‌ನ ದೀಪ್ ಡಿಸಿಲ್ವ ಉಪಸ್ಥಿತರಿದ್ದರು. ಆರ್‌ಜೆ ಅನುರಾಗ್ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net