ಮಣ್ಣಗುಡ್ಡ ಗಾಂಧಿನಗರ ಶಾಲೆಯಲ್ಲಿ ವನಮಹೋತ್ಸವ

mng--2 July mannagudda
Published on

ಮಂಗಳೂರು: ಮಣ್ಣಗುಡ್ಡೆಯ ಗಾಂಧಿನಗರದ ದ.ಕ ಜಿಲ್ಲಾ ಪಂಚಾಯಿತಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಾಮರಸ್ಯ ಮಂಗಳೂರು ವೇದಿಕೆ ಹಾಗೂ ದ.ಕ ಜಿಲ್ಲಾ ಕರಾವಳಿ ಹಾಲುಮತ ಕುರುಬರ ಸಂಘ ಇದರ ಜಂಟಿ ಆಶ್ರಯದಲ್ಲಿ ವನಮಹೋತ್ಸವ ಆಚರಿಸಲಾಯಿತು.


ಮ.ನ.ಪಾ ಮಾಜಿ ಸದಸ್ಯ ಪ್ರಕಾಶ್.ಬಿ.ಸಾಲಿಯಾನ್ ಹಾಗೂ ಮಾಜಿ ಮೇಯರ್ ಮೊಹಮ್ಮದ್ ಕುಂಜತ್ತಬೈಲ್ ಅವರು ಗಿಡ ನೆಟ್ಟು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.


ಮಕ್ಕಳಿಗೆ ಪರಿಸರದ ಅರಿವು ಮೂಡಿಸುವ ಉದ್ದೇಶದಿಂದ ನಾವು ವನಮಹೋತ್ಸವ ಕಾರ್ಯಕ್ರಮವನ್ನು ಸರ್ಕಾರಿ ಶಾಲೆಯಲ್ಲಿ ಈ ವರ್ಷ ಆಯೋಜಿಸಿದ್ದೇವೆ. ವಿದ್ಯಾರ್ಥಿಗಳು ಪರಿಸರದಲ್ಲಿ ಹೆಚ್ಚು ಗಿಡ-ಮರ ಗಳನ್ನು ಬೆಳೆಸುವ ಮೂಲಕ ಜನರಲ್ಲಿ ಪರಿಸರದ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸಲು ಸಂಕಲ್ಪ ತೊಡಬೇಕೆಂದು ಸಾಮರಸ್ಯ ಮಂಗಳೂರು ವೇದಿಕೆಯ ಅಧ್ಯಕ್ಷರಾದ ಮಂಜುಳಾ ನಾಯಕ್ ಹೇಳಿದರು.


ಕರಾವಳಿ ಹಾಲುಮತ ಕುರುಬರ ಸಂಘದ ಅಧ್ಯಕ್ಷ ಚಂದ್ರಪ್ಪ ಬಿ.ಕೆ, ಸಂಘದ ಕಾರ್ಯದಕ್ಷ ಅರುಣ್ ಕುಮಾರ್, ಸಂಘದ ಉಪಾಧ್ಯಕ್ಷ ಹರೀಶ್ ನಗುರ್ಂದ, ಕಾರ್ಯದರ್ಶಿ ಯಮನಪ್ಪ ಮುತ್ತಲ್ ಗೆರಿ, ಖಜಾಂಶಿ ಮಂಜು ಮಡ್ಡಿ,
ಕೊಂಕಣಿ ಸಾಹಿತ್ಯ ಅಕಾಡೆಮಿಯ ಸದಸ್ಯ ಸಮರ್ಥ್ ಭಟ್, ಕುರುಬರ ಸಂಘದ ಮಲ್ಲಿಕಾಜುರ್ನ್, ವಿದ್ಯಾ ಶೆಣೈ, ಮಾಲಿನಿ ನಾಯಕ್, ಯೋಗೀಶ್ ನಾಯಕ್, ನೀತ್ ಶರಣ್, ರಾಜೇಶ್ ದೇವಾಡಿಗ, ಸಂಜನಾ ಚಲವಾದಿ ಮತ್ತಿತರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net