

ಮಂಗಳೂರು
ಪಶ್ಚಿಮ ಕರಾವಳಿ ರೈಲ್ವೆ ಯಾತ್ರಿ ಅಭಿವೃದ್ಧಿ ಸಮಿತಿ ಅಧ್ಯಕ್ಷರು ಹಾಗೂ ಪಾಲಕಾಡ ರೈಲ್ವೆ ವಿಭಾಗ ಬಳಕೆದಾರರ ಸಲಹಾ ಸಮಿತಿ ಸದಸ್ಯ ಹನುಮಂತ ಕಾಮತ್ ಮತ್ತು ಸಲಹಾ ಸಮಿತಿ ಸದಸ್ಯ ಅಹಮ್ಮದ್ ಬಾವಾ ಅವರು ಪಾಲಕ್ಕಾಡ್ ವಿಭಾಗೀಯ ರೆಲ್ವೆ ಪ್ರಬಂಧಕ ಮುಕುಂದ ಅವರಿಗೆ ನಗರದ ಮಂಗಳೂರು ಸೆಂಟ್ರಲ್ ನಿಲ್ದಾಣದಲ್ಲಿ ಭಾನುವಾರ ಬೆಳಗ್ಗೆ ಸಲ್ಲಿಸಿದರು.
* ಬೇಡಿಕೆ ಏನು ?
ಮಂಗಳೂರು ಸೆಂಟ್ರಲ್ ನಲ್ಲಿ ನಡೆಯುತ್ತಿರುವ ಹೊಸ ಪ್ಲಾಟ್ಫಾರ್ಮ್‌ಗಳ ಕಾಮಗಾರಿ ಶೀಘ್ರ ವಾಗಿ ಪೂರ್ಣಗೊಳಿಸುವುದು.
ಮಂಗಳೂರು ಸೆಂಟ್ರಲ್ಹೆ ನಲ್ಲಿ ಹೆಚ್ಚುವರಿ ಪಾರ್ಕಿಂಗ್ ಲೈನ್‌ಗಳನ್ನು ಅಳವಡಿಸುವುದು.
ಮಂಗಳೂರು ಸೆಂಟ್ರಲ್ ನಲ್ಲಿ ಈಗಿರುವ ಬೇ ಲೈನ್ ಪ್ಲಾಟ್‌ಫಾರ್ಮ್ ನಲ್ಲಿ 9 ಬೋಗಿಗಳ ಗಾಡಿ ಗಳ ನ್ನು ನಿಲ್ಲಿಸುವ ಸಾಮರ್ಥ್ಯ ಇದ್ದು, ಇದನ್ನು 16 ಭೋಗಿಗಳ ರೈಲು ಗಾಡಿಗಳು ತಂಗಲು ಅನುವಾಗುವಂತೆ ಈ ಫ್ಲಾೃಟ್‌ಫಾರ್ಮ್‌ನ ಉದ್ದವನ್ನು ಹೆಚ್ಚಿಸುವ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು.
ಮಂಗಳೂರು ಸೆಂಟರ್ ಹಾಗೂ ಮಂಗಳೂರು ಜಂಕ್ಷನ್ ನಡುವೆ ಇರುವ ಹಳಿಗಳ ನ್ನು ದ್ವಿಪಥ ಗೊಳಿಸುವುದು.
ಮಂಗಳೂರು ಸೆಂಟ್ರಲ್ ನಲ್ಲಿ ಹೆಚ್ಚುವರಿ ಪ್ಲಾಟ್ಫಾರ್ಮ್ ಗಳ ನಿರ್ಮಾಣ ಆದ ಬಳಿಕ ಮಂಗಳೂರು ಜಂಕ್ಷನ್‌ನಿಂದ ಹೋಗಿ ಬರುತ್ತಿರುವ ಮಂಗಳೂರು - ಯಶವಂತಪುರ ಹಗಲು ರೈಲು ಗಾಡಿ, ಮಂಗಳೂರು - ವಿಜಯಪುರ ಎಕ್ಸ್‌ಪ್ರೆಸ್ ಹಾಗೂ ಮಂಗಳೂರು - ಮುಂಬೈ ಸಿಎಸ್‌ಟಿ - ಮಂಗಳೂರು ಜಂಕ್ಷನ್ ಎಕ್ಸ್ಪ್ರೆಸ್ ರೈಲು ಗಾಡಿ ಗಳ ನ್ನು ಮಂಗಳೂರು ಸೆಂಟ್ರಲ್ ವರೆಗೆ ವಿಸ್ತರಣೆ.
ಈಗ ವಾರದಲ್ಲಿ 6 ದಿನ ಮೈಸೂರು ಮೂಲಕ ಸಂಚರಿಸುತ್ತಿರುವ ಮಂಗಳೂರು - ಬೆಂಗಳೂರು ರೈಲು ಗಾಡಿಯನ್ನು ಪ್ರತಿ ದಿನ ಓಡಿಸುವಂತೆ ಆಗ್ರಹಿಸಲಾಯಿತು.
ಮೀಟರ್ ಗೇಜು ಕಾಲದಲ್ಲಿ ಓಡಾಟ ನೆಡೆಸುತ್ತಿದ್ದ, ನಿತ್ಯ ಪ್ರಯಾಣಿಕರಿಗೆ ಅನುಕೂಲ ಆಗಿದ್ದ ಸುಬ್ರಹ್ಮಣ್ಯ - ಮಂಗಳೂರು ಪ್ಯಾಸೆಂಜರ್ ರೈಲಿನ ಪುನರಾರಂಭಿಸಬೇಕು ಎಂದು ಮನವಿ ಮಾಡಲಾಗಿದೆ.