

ಮಂಗಳೂರು : ವಕೀಲರ ಸಂಘದ ಸದಸ್ಯರಾದ ಜಯಪ್ರಕಾಶ್ ಹಾಗೂ ಸ್ವಾತಿ ಎಂಬವರ ಮೇಲೆ ವೆಲೇರಿಯನ್ ಮೆಂಡೋನ್ಸ
ಎಂಬಾತ ಹಲ್ಲೆ ಮಾಡಿದ್ದು, ಆತನನ್ನು ತಕ್ಷಣ ಬಂಧಿಸಬೇಕು ಎಂದು ಒತ್ತಾಯಿಸಿ ಮಂಗಳೂರು ವಕೀಲರ ಸಂಘದ ವತಿಯಿಂದ ಗುರುವಾರ ನ್ಯಾಯಾಲಯದ ಅವರಣದಲ್ಲಿ ಪ್ರತಿಭಟನೆ ನಡೆಯಿತು.
ಮಂಗಳೂರು ಕಂಕನಾಡಿ ನಗರ ಠಾಣೆಯಲ್ಲಿ ವೆಲೇರಿಯನ್ ವಿರುದ್ಧ ಈಗಾಗಲೇ ಜಾಮೀನು ರಹಿತ ದೂರು ದಾಖಲಾಗಿದ್ದು, ಪೊಲೀಸರು ಈವರೆಗೂ ವೆಲೇರಿಯನ್ ಮೇಲೆ ಯಾವುದೇ ಕ್ರಮ ಕೈಗೊಳ್ಳದೆ ಹಿನ್ನೆಲೆ ಪ್ರತಿಭಟನೆ ನಡೆಸಿ, ಪೊಲೀಸರನ್ನು ಒತಾಯಿಸಲಾಯಿತು.
ಹಿರಿಯ ವಕೀಲರಾದ ಮೋನಪ್ಪ ಭಂಡಾರಿ, ಕೆ. ಶಂಭುಶರ್ಮ, ಅಶೋಕ ಅರಿಗ, ಪೃಥ್ವಿರಾಜ್ ರೈ, ರವೀಂದ್ರನಾಥ್ ಪಿ.ಎಸ್., ನರಸಿಂಹ ಹೆಗಡೆ, ನಂದಕೀಶೋರ್, ಪುಷ್ಪಲತಾ ಯು.ಕೆ, ಸುಮನಾ ಶರಣ್ ಮೊದಲಾದವರು ಆರೋಪಿಯನ್ನು ಶೀಘ್ರ ಬಂಧಿಸುವಂತೆ ಆಗ್ರಹಿಸಿದರು.
ಮಂಗಳೂರು ವಕೀಲರ ಸಂಘದ ಅಧ್ಯಕ್ಷರಾದ ಎಚ್.ವಿ ರಾಘವೇಂದ್ರ ಪ್ರತಿಭಟನೆಯ ನೇತೃತ್ವ ವಹಿಸಿದ್ದರು. ಮಂಗಳೂರು ವಕೀಲರ ಸಂಘದ ಉಪಾಧ್ಯಕ್ಷರಾದ ಸುಜಿತ್ ಕುಮಾರ್, ಪ್ರಧಾನ ಕಾರ್ಯದರ್ಶಿ ಶ್ರೀಧರ್ ಹೊಸಮನೆ, ಜೊತೆ ಕಾರ್ಯದರ್ಶಿ ಜ್ಯೋತಿ, ಕೋಶಾಧಿಕಾರಿ ಗಿರೀಶ್ ಶೆಟ್ಟಿ ಹಾಗೂ ಸಮಿತಿ ಪದಾಧಿಕಾರಿಗಳು, ಹಿರಿಯ ಮತ್ತು ಕಿರಿಯ ವಕೀಲರು, ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.