ಹಿರಿಯ ವಕೀಲ ಅಸ್ವಾಭಾವಿಕ ಸಾವು

mng--11 july Harish Acharya
Published on

ಮಂಗಳೂರು: ನಗರದ ಹಿರಿಯ ವಕೀಲ ಬಿ.ಹರೀಶ್ ಆಚಾರ್ಯ (60) ಬಾರೆಬೈಲ್ ಬಿಜೈಯ ನಿರ್ಮಲ ನಿವಾಸದಲ್ಲಿ ಅಸ್ವಾಭಾವಿಕವಾಗಿ ಮೃತಪಟ್ಟಿರುವುದು ಮಂಗಳವಾರ ಬೆಳಕಿಗೆ ಬಂದಿದೆ.


ಮೃತ ದೇಹವು ಭಾಗಶಃ ಕೊಳೆತ ಸ್ಥಿತಿಯಲ್ಲಿದ್ದು, ಎರಡು ದಿನಗಳ ಹಿಂದೆ ಹೃದಯಾಘಾತ ಅಥವಾ ಆಕಸ್ಮಿಕವಾಗಿ ಬಿದ್ದು ಮೃತಪಟ್ಟಿರುವ ಸಾಧ್ಯತೆ ಇದೆ ಎಂದು ಪೊಲೀಸರು ಶಂಕಿಸಿದ್ದಾರೆ. ಅವರು ಮನೆಯಲ್ಲಿ ಒಬ್ಬಂಟಿಯಾಗಿ ವಾಸ ಮಾಡುತ್ತಿದ್ದರು.


ಜು.7ರಂದು ನ್ಯಾಯಾಲಯಕ್ಕೆ ವಕಾಲತ್ತಿಗೆಂದು ಹೋಗಿದ್ದರು. ಜು.8ರಂದು ಅಂಗಡಿಯಿಂದ ಪತ್ರಿಕೆ ತೆಗೆದುಕೊಂಡು ತೆರಳಿದ್ದರು. ಜೂ.9ರಂದು ಅವರ ಜೂನಿಯರ್ ವಕೀಲರು ಕರೆ ಮಾಡಿದಾಗ ಸ್ವೀಕರಿಸಿರಲಿಲ್ಲ. 10ರಂದು ಕೂಡಾ ಕರೆ ಮಾಡಿದಾಗ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ. ಮಂಗಳವಾರ ಅವರ ಮನೆಗೆ ಬಂದು ನೋಡುವಾಗ ಬಿದ್ದು ಮೃತಪಟ್ಟ ಸ್ಥಿತಿಯಲ್ಲಿ ಕಂಡು ಬಂದಿದ್ದಾರೆ.


ಮೃತರ ರಕ್ತ ಸಂಬಂಧಿಗಳು ಯಾರು ಕೂಡ ಸ್ಥಳದಲ್ಲಿ ಹಾಜರು ಇರದ ಕಾರಣ ಅವರು ಬರುವ ತನಕ ಮೃತದೇಹವನ್ನು ವೆನ್ಲಾಕ್ ಶವಾಗಾರದಲ್ಲಿಡಲಾಗಿದೆ. ಯಾರಾದರೂ ರಕ್ತ ಸಂಬಂಧಿಕರು ಇದ್ದರೆ ಹೆಚ್ಚಿನ ಮಾಹಿತಿಗೆ ಉರ್ವಾ ಪೊಲೀಸ್ ಠಾಣೆ 0824-2220521 ಅಥವಾಮಂಗಳೂರು ಕಂಟ್ರೋಲ್ ರೂಂ ನಂಬ್ರ 0824-2220800ಗೆ ಸಂಪರ್ಕಿಸಲು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net