ಮಂಗಳೂರು ಲಿಟ್ ಫೆಸ್ಟ್ ಗೆ ಚಾಲನೆ

IMG-20220408-WA0006
Published on

ಮಂಗಳೂರು: ನಾಲ್ಕನೇ ಆವೃತ್ತಿಯ ಮಂಗಳೂರು ಲಿಟ್ ಫೆಸ್ಟ್ ಗೆ ಶುಕ್ರವಾರ ಓಶಿಯನ್ ಪರ್ಲ್ ಹೋಟೆಲ್‌ನಲ್ಲಿ ಚಾಲನೆ ಸಿಕ್ಕಿತು.
ಶತಾವಧಾನಿ ಡಾ.ರಾ.ಗಣೇಶ್ ಅವರು ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಭಾರತೀಯ ಸಂಸ್ಕೃತಿಯನ್ನು ಬೆಳೆಸುವಲ್ಲಿ ಕಲೆ ಸಾಹಿತ್ಯಗಳು ಅವಶ್ಯ. ಇಂದು ಅಂತರ್ಜಾಲ ಮಾಧ್ಯಮ ದಿಂದಾಗಿ ಯಾವುದಕ್ಕೂ ಸ್ವಂತಿಕೆ ಇಲ್ಲದಂತಾಗಿದೆ ಎಂದರು.
ಮಿಥಿಕ್ ಸೊಸೈಟಿ ಆಡಳಿತ ಮಂಡಳಿ ಸದಸ್ಯ ಪ್ರಸನ್ನ ಉಪಸ್ಥಿತರಿದ್ದರು. ವಾಗ್ಮಿ ಪ್ರಕಾಶ್ ಮಲ್ಪೆ ಪರಿಚಯಿಸಿದರು. ಮಂಗಳೂರು ಲಿಟ್ ಫೆಸ್ಟ್ ಸಂಘಟಕ ಸುನೀಲ್ ಕುಲಕರ್ಣಿ ಸ್ವಾಗತಿಸಿ, ಪ್ರಸ್ತಾವಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net