ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆಂದು ತೆರಳಿದ ಮಹಿಳೆ ನಾಪತ್ತೆ

missing
Published on

ಮಂಗಳೂರು : ದೇವಸ್ಥಾನಕ್ಕೆಂದು ತೆರಳಿದ ಮಹಿಳೆಯೋರ್ವರು ನಾಪತ್ತೆಯಾಗಿರುವ ಬಗ್ಗೆ ಪ್ರಕರಣ ದಾಖಲಾಗಿದೆ.

ಆಕಾಶಭವನ ಮುಲ್ಲಕಾಡು ನಿವಾಸಿ ಸದಾಶಿವ ಅವರ ಪತ್ನಿ ಸವಿತಾ(34) ನಾಪತ್ತೆಯಾದವರು. ಇವರು ಕಳೆದ ಸುಮಾರು 6 ತಿಂಗಳುಗಳಿಂದ ಮಾನಸಿಕ ಅಸ್ವಸ್ಥೆಯಾಗಿ ಬಳಲುತ್ತಿದ್ದು ಚಿಕಿತ್ಸೆ ಕೊಡಿಸಲಾಗಿತ್ತು. ನ.10ರಂದು ಬೆಳಗ್ಗೆ 10.30ಕ್ಕೆ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಹೋಗಿ ಬರುವುದಾಗಿ ಹೇಳಿ ಹೋದವರು ವಾಪಸಾಗದೆ ನಾಪತ್ತೆಯಾಗಿದ್ದಾರೆ.

5.5 ಅಡಿ ಎತ್ತರ, ಎಣ್ಣೆಕಪ್ಪು ಮೈಬಣ್ಣ, ದುಂಡು ಮುಖ, ಸಾಧಾರಣ ಶರೀರ ಹೊಂದಿದ್ದು ಬಿಳಿಬಣ್ಣದ ಚೂಡಿದಾರ, ಕೆಂಪು ಬಣ್ಣದ ಪ್ಯಾಂಟ್ ಧರಿಸಿದ್ದರು. ಹಿಂದಿ, ಕನ್ನಡ, ತುಳು ಭಾಷೆಗಳನ್ನು ಮಾತನಾಡುತ್ತಾರೆ. ಮಾಹಿತಿ ದೊರೆತವರು ಕಾವೂರು ಪೊಲೀಸ್ ಠಾಣೆ (0824-2220533) ಸಂಪರ್ಕಿಸುವಂತೆ ಪೊಲೀಸರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net