

ಮಂಗಳೂರು: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ದಕ್ಷಿಣ ಕನ್ನಡ, ಶಿಶು ಅಭಿವೃದ್ಧಿ ಯೋಜನೆ ಮಂಗಳೂರು ನಗರ, ಕುಂಜತ್ ಬೈಲ್ ಬಾವಿ ಅಂಗನವಾಡಿ ಕೇಂದ್ರ,ದುರ್ಗಾ ದೇವಿ ಭಜನಾ ಮಂದಿರ,ದುರ್ಗಾದೇವಿ ಫ್ರೆಂಡ್ಸ್ ಮತ್ತು ಭ್ರಾಮರಿ ಮಹಿಳಾ ತಂಡ ಹಾಗೂ ಅಧಾನಿ ಫೌಂಡೇಶನ್ ಇವರ ಸಂಯುಕ್ತ ಆಶ್ರಯದಲ್ಲಿ ಪೋಷಣ್ ಮಾಸಾಚರಣೆ ಕಾರ್ಯಕ್ರಮ ಶ್ರೀ ದುರ್ಗಾ ದೇವಿ ಭಜನಾ ಮಂದಿರ ದೇವಿನಗರದಲ್ಲಿ ಜರುಗಿತು.
ಆದಾನಿ ಸಂಸ್ಥೆಯ ಡಾ.ಪ್ರೇಮ ಡಿಸೋಜ ಅವರು, ಸಮತೋಲಿತ ಆಹಾರ ಹಾಗೂ ಗರ್ಭಿಣಿ, ಬಾಣಂತಿಯರು ಸೇವಿಸಬೇಕಾದ ಪೌಷ್ಟಿಕ ಆಹಾರದ ಬಗ್ಗೆ ಮಾಹಿತಿ ನೀಡಿದರು.
ನಮ್ಮ ಕ್ಲಿನಿಕ್ ನ ವೈದ್ಯಾಧಿಕಾರಿ ಡಾ. ಧೃತಿ ಇವರು ಮಕ್ಕಳಿಗೆ ಹಾಗೂ ಗರ್ಭಿಣಿ ಮಹಿಳೆಯರಿಗೆ ನೀಡಬೇಕಾದ ಚುಚ್ಚುಮದ್ದುಗಳ ಬಗ್ಗೆ ತಿಳಿಸಿದರು. ಕದ್ರಿ ವಲಯದ ಮೇಲ್ವಿಚಾರಕಿ ಸಾಕು ಇವರು ಪೋಷಣ್ ಮಾಸಾಚರಣೆಯ ಉದ್ದೇಶ ಹಾಗೂ ಪೋಷಣ್ ಅಭಿಯಾನ ಯೋಜನೆ ಮಹತ್ವದ ಬಗ್ಗೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಸೀಮಂತ ಹಾಗೂ ಅನ್ನಪ್ರಾಶನ ಕಾರ್ಯಕ್ರಮ ನಡೆಯಿತು. ಮುಖ್ಯ ಅತಿಥಿಗಳಾಗಿ ದುರ್ಗಾದೇವಿ ಭಜನಾ ಮಂದಿರದ ಅಧ್ಯಕ್ಷ ಮೋಹನ್ ದಾಸ್, ಬಾಲವಿಕಾಸ ಸಮಿತಿ ಅಧ್ಯಕ್ಷ ಶ್ವೇತಾದಾಸ್,ಭ್ರಾಮರಿ ಮಹಿಳಾ ತಂಡದ ಶೋಭಾ,ದೇವಿ ಫ್ರೆಂಡ್ಸ್ ಕ್ಲಬ್ ನ ಅಶೋಕ್, ಆರೋಗ್ಯ ಕಾರ್ಯಕರ್ತೆ ವಿಶಾಲಾಕ್ಷಿ ಉಪಸ್ಥಿತರಿದ್ದರು.
ಕೇಂದ್ರದ ಪೋಷಕರು ತಯಾರಿಸಿ ತಂದ ವಿವಿಧ ಬಗೆಯ ಪೌಷ್ಟಿಕ ಆಹಾರ ಪ್ರದರ್ಶನ ಮತ್ತು ಉತ್ತಮ ಪೌಷ್ಟಿಕ ಆಹಾರಕ್ಕೆ ಬಹುಮಾನ ನೀಡಲಾಯಿತು. ಕಾರ್ಯಕ್ರಮದಲ್ಲಿ ಆಶಾ ಕಾರ್ಯಕರ್ತೆ,ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿ,ಮಕ್ಕಳ ಪೋಷಕರು ಹಾಗೂ ಅಂಗನವಾಡಿ ಕೇಂದ್ರದ ಮಕ್ಕಳು ಹಾಜರಿದ್ದರು. ಅಂಗನವಾಡಿ ಕೇಂದ್ರದ ಕಾರ್ಯಕರ್ತೆ ರೇಷ್ಮಾ ಕಾರ್ಯಕ್ರಮ ನಿರೂಪಿಸಿದರು.