

ಮಂಗಳೂರು: ತಾಯಿಯಂದಿರದ ದಿನದ ಅಂಗವಾಗಿ ಅದಾನಿ ಸುಪೋಶನ್ ವತಿಯಿಂದ ಭಾನುವಾರ ಕುಂಜತ್ತಬೈಲ್‌ನಲ್ಲಿ ಅದಾನಿ ಸುಪೋಶನ್ ವತಿಯಿಂದ ಕಾರ್ಯಕ್ರಮ ಜರುಗಿತು.
ಸುಪೋಶನ್ ಅಧಿಕಾರಿ ಡಾ.ಪ್ರೇಮಾ ಡಿಸೋಜ ಅವರು ತಾಯಿ ಪ್ರೀತಿ ಹಾಗೂ ಗೌರವಯುತವಾಗಿ ನೋಡಿಕೊಳ್ಳುವ ಮಕ್ಕಳ ಜವಾಬ್ದರಿಯ ಕುರಿತು ಮಾಹಿತಿ ನೀಡಿದರು. ಸಂಗಿನಿಯರಾದ ಬಬಿತಾ, ಸುನಿತಾ ಮೊದಲಾದವರು ಉಪಸ್ಥಿತರಿದ್ದರು. ಈ ಸಂದರ್ಭ ಮಕ್ಕಳು ತಾಯಿಯ ಬಗ್ಗೆ ಮಾತನಾಡಿದರು.