

ಮಂಗಳೂರು: ಡೆಲ್ಟಾ ಸಮೂಹ ಸಂಸ್ಥೆಯು ಕಸ್ತೂರ್ಬಾ ವೈದ್ಯಕೀಯ ಕಾಲೇಜು ಆಸ್ಪತ್ರೆಯ ಸಹಯೋಗದಲ್ಲಿ ರಕ್ತದಾನ ಹಾಗೂ ಆರೋಗ್ಯ ತಪಾಸಣಾ ಶಿಬಿರ ಗುರುವಾರ ಸಂಸ್ಥೆಯ ಪ್ರಧಾನ ಕಚೇರಿ ಕೂಳೂರಿನಲ್ಲಿ ನಡೆಯಿತು.
\
ಡೆಲ್ಟಾ ಇನ್ಪ್ರಾಲಾಜಿಸ್ಟಿಕ್ ವರ್ಲ್ಡ್ ವೈಡ್ ಲಿಮಿಟೆಡ್‌ನ ಅಧ್ಯಕ್ಷ ಅಹ್ಮದ್ ಮೊಹಿಯುದ್ದೀನ್, ನಿರ್ದೇಶಕ ಶಮೀಲ್ ಅಹ್ಮದ್, ಪಾಲುದಾರ ಬದ್ರುದ್ದೀನ್, ಕೆ ಐಒಸಿಎಲ್ ಡಿಜಿಎಂ ಕಾರ್ತಿಕೇಯನ್, ಎಜಿಎಂ ಪವನ್ ರಾಜ್, ಆಸ್ಟಿನ್ ವಾಲ್ ಆ್ಯಂಡ್ ಕಂಪೆನಿಯ ಸಲಹೆಗಾರ ಶೇಖರ ಪೂಜಾರಿ, ಎಸ್‌ಬಿಐ ಎಜಿಎಂ ಎಸ್.ಎಂ.ಮಠದ್, ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್‌ನ ಸೇಲ್ಸ್ ಮ್ಯಾನೇಜರ್ ದಿನೇಶ್ ಕುರು ಅತಿಥಿಗಳಾಗಿದ್ದರು.
ರಕ್ತದಾನ ಶಿಬಿರದ ಜತೆಗೆ ಇಸಿಜಿ, ಚರ್ಮರೋಗ, ನೇತ್ರ ತಪಾಸಣೆ, ಜನರಲ್ ಮೆಡಿಸಿನ್ ಮತ್ತು ಸ್ತ್ರೀ ರೋಗ ಸೇರಿದಂತೆ ಸಮಗ್ರ ಆರೋಗ್ಯ ತಪಾಸಣೆ ನಡೆಸಲಾಯಿತು.